ನವದೆಹಲಿ: ಸುದೀರ್ಘ ಕಾಲದ ಚೀನಾ– ಟಿಬೆಟ್ ಸಂಘರ್ಷವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕೇಂದ್ರ ಟಿಬೆಟ್ ಆಡಳಿತ (ಸಿಟಿಎ) ಪುನಃ ಕರೆ ನೀಡಿದೆ.

‘ದಲೈಲಾಮಾ ಅವರ ಪ್ರತಿನಿಧಿಗಳ ಜೊತೆಗೆ ಮಾತ್ರವೇ ಟಿಬೆಟ್ ಕುರಿತು ಮಾತುಕತೆ ನಡೆಸಲಾಗುವುದು. ಸಿಟಿಎ ಅಧಿಕಾರಿಗಳ ಜೊತೆ ಮಾತುಕತೆಗೆ ಸಿದ್ಧವಿಲ್ಲ’ ಎಂದು ಚೀನಾ ಹೇಳಿದ ಬೆನ್ನಲ್ಲೇ ಈ ಹೇಳಿಕೆ ನೀಡಿದೆ.

ಸಿಟಿಎ ವಕ್ತಾರ ತೆನ್‌ಜಿನ್ ಲೆಕ್‌ಶಾಯ್, ‘ಚೀನಾ ಸಂವಿಧಾನದ ಚೌಕಟ್ಟಿನ ಒಳಗೆ ಟಿಬೆಟ್ ಜನರಿಗೆ ಸ್ವಾಯತ್ತತೆ ಸಿಗಬೇಕೆಂದು ಬಯಸುತ್ತೇವೆ. ದೀರ್ಘಕಾಲದ ಸಮಸ್ಯೆ ಪರಿಹಾರ ಕಂಡುಕೊಳ್ಳುವುದರಿಂದ ಎರಡೂ ಕಡೆಗೆ ಸಹಾಯವಾಗಲಿದೆ’ ಎಂದು ಹೇಳಿದರು.

ಕಳೆದ ವಾರ ಸಿಟಿಎ ರಾಜಕೀಯ ಮುಖ್ಯಸ್ಥ ಪೆನ್ಪಾ ಸೆರಿಂಗ್ ಅವರು, ‘ಟಿಬೆಟ್ ಸಮಸ್ಯೆ ಪರಿಹಾರಕ್ಕೆ ಚೀನಾದೊಂದಿಗೆ ಅನೌಪಚಾರಿಕ ಮಾತುಕತೆಯಲ್ಲಿ ನಿರತವಾಗಿದ್ದೇವೆ. ಆದರೆ, ಇದರ ಮೇಲೆ ನಮಗೆ ಯಾವುದೇ ತಕ್ಷಣದ ನಿರೀಕ್ಷೆಗಳಿಲ್ಲ. ಈ ಪ್ರಯತ್ನ ದೀರ್ಘಾವಧಿಯಲ್ಲಿ ಫಲಿಸಬಹುದು’ ಎಂದು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.