ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಬೇಕು ಎಂದು ಆರ್ಥಿಕ ಸಮೀಕ್ಷೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಕೇಂದ್ರ ಸರ್ಕಾರಿ ನೌಕರರಹಾಲಿ ನಿವೃತ್ತಿ ವಯಸ್ಸು 60.

ಪ್ರಸ್ತುತ ಸಂದರ್ಭದಲ್ಲಿ ನಿವೃತ್ತಿ ವಯಸ್ಸು ಏರಿಕೆ ಅನಿವಾರ್ಯ. ಹತ್ತು ವರ್ಷಗಳ ನಂತರದ ಸ್ಥಿತಿಯನ್ನು ಗಮನಿಸಿ, ಮಾನವ ಸಂಪನ್ಮೂಲ ಸಜ್ಜುಗೊಳ್ಳುವಂತೆ ಮುಂದಾಗಿ ಪರಿಷ್ಕರಿಸುವುದು ಸೂಕ್ತ ಎಂದೂ ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಸಂಸತ್ತಿನಲ್ಲಿ 2019ನೇ ಸಾಲಿನ ಆರ್ಥಿಕ ಸಮೀಕ್ಷೆಯ ವರದಿಯನ್ನು ಮಂಡಿಸಿದರು.ಜರ್ಮನಿ, ಫ್ರಾನ್ಸ್, ಅಮೆರಿಕ ನಿವೃತ್ತಿ ವಯೋಮಿತಿಯನ್ನು ಈಗಾಗಲೇ ಏರಿಸಿವೆ.ಇತರೆ ರಾಷ್ಟ್ರಗಳೂ ನಿಗದಿತ ಅಂತರದಲ್ಲಿ ಏರಿಕೆ ಮಾಡುತ್ತಿವೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ವಯೋಮಿತಿ ಏರಿಕೆ ಸಲಹೆಗೆ ಸಮರ್ಥನೆ ನೀಡಲಾಗಿದೆ.

ಆದರೆ, ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ನಿವೃತ್ತಿ ವಯಸ್ಸನ್ನು ಎಷ್ಟು ವರ್ಷ ಏರಿಸಬೇಕು ಎಂಬುದರ ಬಗ್ಗೆ ಸಮೀಕ್ಷೆಯಲ್ಲಿ ಉಲ್ಲೇಖವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.