ಕೋಲ್ಕತ್ತ: ನಗರದಲ್ಲಿ ನಡೆಯುತ್ತಿದ್ದ ಪ್ರಸಿದ್ಧ ದುರ್ಗಾ ಪೂಜಾ ಪೆಂಡಾಲ್ನಲ್ಲಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಕುರಿತ ಕರಪತ್ರಗಳನ್ನು ಹಂಚುತ್ತಿದ್ದ 29 ಮಂದಿಯನ್ನು ಪೊಲೀಸರು ಬುಧವಾರ ಸಂಜೆ ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೈದ್ಯರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಜನಸಾಮಾನ್ಯರು ಕರಪತ್ರ ಹಂಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಅವರೆಲ್ಲರೂ ನಮ್ಮ ಸಹೋದ್ಯೋಗಿಗಳು ಎಂದು ಕಿರಿಯ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಸಹೋದ್ಯೋಗಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ನಮ್ಮ ಸಹೋದ್ಯೋಗಿಗಳನ್ನು ಲಾಲ್ಬಜಾರ್ಗೆ ಏಕೆ ಕರೆತಂದಿದ್ದಾರೆ ಎಂದು ಪೊಲೀಸರು ನಮಗೆ ತಿಳಿಸಿಲ್ಲ. ಇದು ದೌರ್ಜಜ್ಯವಲ್ಲದೆ ಬೇರೇನೂ ಅಲ್ಲ. ನಮ್ಮ ಸ್ನೇಹಿತರನ್ನು ಬಿಡುಗಡೆ ಮಾಡದ ಹೊರತು ನಾವು ಬಿಡುವುದಿಲ್ಲ ಎಂದು ಕಿರಿಯ ವೈದ್ಯರೊಬ್ಬರು ಹೇಳಿದ್ದಾರೆ.

ದೇಶಪ್ರಿಯ ಪಾರ್ಕ್ ತಲುಪುವ ಮೊದಲು ಪ್ರತಿಭಟನಾ ವೈದ್ಯರು ಕರಪತ್ರಗಳನ್ನು ಹಂಚಿದ್ದು, ಕೋಲ್ಕತ್ತದ ಮ್ಯಾಡಾಕ್ಸ್ ಸ್ಕ್ವೇರ್ನಲ್ಲಿ ನಡೆಯುತ್ತಿದ್ದ ಮತ್ತೊಂದು ದುರ್ಗಾ ಪೂಜೆಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

ಏತನ್ಮಧ್ಯೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಲಾಲ್ ಬಜಾರ್ ಪ್ರದೇಶದ ಸುತ್ತಲೂ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು.

ಕೋಲ್ಕತ್ತದ ಆರ್.ಜಿ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಮತ್ತು ಆಸ್ಪತ್ರೆಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.