ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ (ಎನ್ಸಿಡಬ್ಲ್ಯು) ವರದಕ್ಷಿಣೆ, ಅತ್ಯಾಚಾರ ಮತ್ತು ಅತ್ಯಾಚಾರ ಯತ್ನದ ದೂರುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವೆ ಸ್ಮೃತಿ ಇರಾನಿ, 2022 ರಲ್ಲಿ 357, 2021 ರಲ್ಲಿ 341 ಮತ್ತು 2020 ರಲ್ಲಿ 330 ವರದಕ್ಷಿಣೆ ದೂರುಗಳು ಬಂದಿವೆ ಎಂದು ಮಾಹಿತಿ ನೀಡಿದರು.

‘ಕಳೆದ ಮೂರು ವರ್ಷಗಳಲ್ಲಿ ಮತ್ತು ಪ್ರಸಕ್ತ ವರ್ಷದಲ್ಲಿ ಆಯೋಗದಲ್ಲಿ ವರದಕ್ಷಿಣೆ ಮತ್ತು ಅತ್ಯಾಚಾರ/ಅತ್ಯಾಚಾರದ ಯತ್ನ ವಿಭಾಗಗಳ ಅಡಿಯಲ್ಲಿ ಸ್ವೀಕರಿಸಿದ/ನೋಂದಾಯಿತ ದೂರುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ’ ಎಂದು ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಅಂಕಿ ಅಂಶಗಳ ಪ್ರಕಾರ, 2022 ರಲ್ಲಿ 1,710 ಅತ್ಯಾಚಾರ ಮತ್ತು ಅತ್ಯಾಚಾರ ಪ್ರಯತ್ನದ ದೂರುಗಳು, 2021 ರಲ್ಲಿ 1,681 ಮತ್ತು 2020 ರಲ್ಲಿ 1,236 ದೂರುಗಳು ಎನ್ಸಿಡಬ್ಲ್ಯುಗೆ ಬಂದಿವೆ.

ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಇರಾನಿ, ಈ ವರ್ಷದ ಜನವರಿ ವೇಳೆಗೆ 764 ತ್ವರಿತಗತಿ ನ್ಯಾಯಾಲಯಗಳು, 411 ವಿಶೇಷ ಪೋಕ್ಸೊ (ಇ-ಪೋಕ್ಸೊ) ನ್ಯಾಯಾಲಯಗಳು 28 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದು 1,44,000 ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿವೆ. ಈ ನ್ಯಾಯಾಲಯಗಳಲ್ಲಿ ಇನ್ನೂ 1,98,000 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.