ಲಖನೌ: ಬಾಲಕನನ್ನು ಒದ್ದ ಆರೋಪದ ಮೇಲೆ ಉತ್ತರ ಪ್ರದೇಶದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಕಾನ್‌ಸ್ಟೆಬಲ್ ಒಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಬಲ್ಲಿಯಾ ಜಿಲ್ಲೆಯ ಬೆಲ್ತಾರಾ ರೋಡ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಬಾಲಕನನ್ನು ಕಾನ್‌ಸ್ಟೆಬಲ್ ಒದೆಯುತ್ತಿರುವ ವಿಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಭಾನುವಾರದಿಂದ ಹರಿದಾಡುತ್ತಿದೆ.

ಆರೋಪಿ ಕಾನ್‌ಸ್ಟೆಬಲ್ ಅನ್ನು ಬಲೀಂದರ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಈಶಾನ್ಯ ರೈಲ್ವೆಯ (ಎನ್‌ಇಆರ್) ಆರ್‌ಪಿಎಫ್ ವಾರಣಾಸಿ ವಿಭಾಗ ತಿಳಿಸಿದೆ.

‘ಅಜಂಗಢ ಆರ್‌ಪಿಎಫ್ ಇನ್ಸ್‌ಪೆಕ್ಟರ್‌ಗಳು ಈ ವಿಷಯವನ್ನು ತನಿಖೆ ಮಾಡುತ್ತಾರೆ. ಈ ಮಧ್ಯೆ, ಆರೋಪಿ ಪೊಲೀಸ್ ಕಾನ್‌ಸ್ಟೆಬಲ್ ಅನ್ನು ಅಮಾನತುಗೊಳಿಸಲಾಗಿದೆ" ಎಂದು ಅದು ಹೇಳಿದೆ.

‘ಘಟನೆ ಯಾವಾಗ ನಡೆದಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ, ಪ್ರಕರಣದ ತನಿಖೆ ನಡೆಯುತ್ತಿದೆ’ಎಂದು ವಾರಾಣಸಿ ವಿಭಾಗದ ಪಿಆರ್‌ಒ ಅಶೋಕ್ ಕುಮಾರ್ ಹೇಳಿದ್ದಾರೆ.

ಬಾಲಕ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದಾಗ ಪೊಲೀಸ್ ಆತನನ್ನು ಒದ್ದಿದ್ದಾನೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.