ನವದೆಹಲಿ: ಹೊಲಗಳಲ್ಲಿ ಬಿ.ಟಿ ಬದನೆಕಾಯಿ ಪ್ರಯೋಗವನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಕೋರಿ ಆರ್‌ಎಸ್‌ಎಸ್ ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್ (ಎಸ್‌ಜೆಎಂ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.

‘ಈ ವಿವಾದಾತ್ಮಕ ತಂತ್ರಜ್ಞಾನದ ಪ್ರಯೋಗಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಆರು ರಾಜ್ಯಗಳಿಗೆ ಪರಿಸರ ಇಲಾಖೆ ಸೂಚಿಸಿದೆ.ಆತ್ಮನಿರ್ಭರ ಅಭಿಯಾನಕ್ಕೆ ಈ ಯೋಜನೆ ವಿರುದ್ಧವಾಗಿದೆ. ಈ ಅಭಿಯಾನ ಯಶಸ್ವಿ ಆಗದೇ ಇರಲು ಈ ಪ್ರಯೋಗಕ್ಕೆ ಒಪ್ಪಿಗೆ ನೀಡಿದಂತಿದೆ. ಬಿ.ಟಿ ಬದನೆಕಾಯಿ ತಂತ್ರಜ್ಞಾನ ದೇಶಕ್ಕೆ ಅಗತ್ಯವಿಲ್ಲ. ಬದನೆಕಾಯಿ ಕೃಷಿಯಲ್ಲಿ ರಾಸಾಯನಿಕಗಳು ಅಥವಾ ಇತರೆ ಜೈವಿಕ ತಂತ್ರಜ್ಞಾನವಿಲ್ಲದೇ ಕೀಟಗಳನ್ನು ನಿಯಂತ್ರಿಸಬಹುದು. ಶೀಘ್ರದಲ್ಲೇ ತಾವು ಖುದ್ದಾಗಿ ಈ ಪ್ರಯೋಗವನ್ನು ನಿಲ್ಲಿಸಲು ಸೂಚನೆ ನೀಡಬೇಕು’ ಎಂದು ಎಸ್‌ಜೆಎಂ ಪತ್ರದಲ್ಲಿ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.