ನವದೆಹಲಿ: ಸದಾ ಆಡಳಿತ ಪಕ್ಷದ ವಿರುದ್ಧ ಟೀಕೆ, ವಾಗ್ವಾದಗಳನ್ನು ಮಾಡುತ್ತ ಸಮಾಜಿಕ ತಾಣಗಳಲ್ಲಿ ಕ್ರಿಯಾಶೀಲರಾಗಿರುವ ಕಾಂಗ್ರೆಸ್ ವಕ್ತಾರ ಸಂಜಯ್ ಜಾ ಮುದ್ದಿನ ನಾಯಿಯ ಅಗಲಿಕೆಯಿಂದ ಕಣ್ಣೀರಾಗಿದ್ದಾರೆ.

ಮನಮಿಡಿಯುವ ಪೋಸ್ಟ್ ಮಾಡಿರುವ ಸಂಜಯ್ ಜಾ, ಪ್ರೀತಿ ತುಂಬಿದ ಕಣ್ಗಳಲ್ಲಿ ನೋಡುತ್ತಿರುವ ಸಾಕುನಾಯಿ ಲೂಯಿಸ್ ಫೋಟೊವನ್ನು ಶೇರ್ ಮಾಡಿದ್ದಾರೆ. ಡಚ್ಸ್‌ಹುಂಡ್ ಜಾತಿಯ ಕುಳ್ಳ ಕಾಲುಗಳ ನಾಯಿ ಲೂಯಿಸ್ ಶಾಶ್ವತವಾಗಿ ಕಣ್ಣುಮುಚ್ಚಿರುವುದಾಗಿ ತಿಳಿಸಿದ್ದಾರೆ.

''ನೀವು ಒಂದು ನಾಯಿಯನ್ನು ಇನ್ನೂ ಸಾಕಿಕೊಂಡಿಲ್ಲವೆ? ಒಂದು ನಾಯಿಯನ್ನು ತಂದು ಸಾಕಿ. ನಿಮ್ಮ ಜೀವನದಲ್ಲಿ ನಿಜವಾದ ಮ್ಯಾಜಿಕ್ ಸಂಭವಿಸುತ್ತದೆ'' ಎಂದು ಸಲಹೆ ನೀಡಿದ್ದಾರೆ.

''ಲೂಯಿಸ್ ಎಂದರೆ ಪ್ರೀತಿ, ಪ್ರೀತಿ ಎಂದರೆ ಲೂಯಿಸ್'' ಎಂದು ಅಗಲಿದ ನಾಯಿಯ ಬಗ್ಗೆ ಬರೆದುಕೊಂಡಿರುವ ಸಂಜಯ್ ಜಾ ಅವರಿಗೆ ಸಾಮಾಜಿಕ ತಾಣದಲ್ಲಿ ಸಾಂತ್ವಾನ ವ್ಯಕ್ತವಾಗಿದೆ.

''ಸ್ವರ್ಗದಲ್ಲಿ ಮುಂದೊಂದು ದಿನ ಭೇಟಿಯಾಗೋಣ'' ಎಂದು ಲೂಯಿಸ್‌ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್‌ನ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಜಿತಿನ್ ಪ್ರಸಾದ್ ಪಕ್ಷ ತೊರೆದು ಬಿಜೆಪಿ ಸೇರಿದ್ದ ಸಂದರ್ಭ, "ನಿಮ್ಮ ಗರ್ಲ್ ಫ್ರೆಂಡ್ ನಿಮ್ಮನ್ನು ಬಿಟ್ಟು ನಿಮ್ಮ ಶತ್ರುವಿನ ಜೊತೆ ಹೋದರೆ ಕನ್ನಡಿ ನೋಡಲು ಹೋಗಬೇಡಿ. ಅವಳನ್ನು ದೂಷಿಸಬೇಡಿ" ಎಂದು ಮಾರ್ಮಿಕವಾಗಿ ಕಾಲೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.