ಕೋಲ್ಕತ್ತ: ಬಹುಕೋಟಿ ಶಾರದಾ ಚಿಟ್ಫಂಡ್ ಹಗರಣದ ಆರೋಪಿ ಕೋಲ್ಕತ್ತದ ಮಾಜಿ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರು ಶುಕ್ರವಾರವೂ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಲಿಲ್ಲ. ವಿಚಾರಣೆಗೆ ಹಾಜರಾಗುವಂತೆ ಗುರುವಾರವಷ್ಟೇ ಅವರಿಗೆ ಸಿಬಿಐ ಮತ್ತೊಂದು ನೋಟಿಸ್ ಜಾರಿಗೊಳಿಸಿತ್ತು.

ಈ ಪ್ರಕರಣದಲ್ಲಿ ರಾಜೀವ್ ಅವರನ್ನು ಬಂಧಿಸಲು ಸಿಬಿಐಗೆ ವಾರಂಟ್ ಅಗತ್ಯವಿಲ್ಲ ಎಂದು ನಗರ ನ್ಯಾಯಾಲಯ ಗುರುವಾರ ಹೇಳಿತ್ತು.ಇದರ ಬೆನ್ನಲ್ಲೆ ರಾಜೀವ್ ಅವರು ಶುಕ್ರವಾರ ಅಲಿಪೋರ್ ಜಿಲ್ಲೆ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ಶನಿವಾರ ನಡೆಯಲಿದೆ.

ಈ ಕುರಿತು ವಿಚಾರಣೆಗೆ ಹಾಜರಾಗುವಂತೆ ಅವರಿಗೆಕಳೆದ ವಾರವೂ ಸಿಬಿಐ ಸಮನ್ಸ್ ನೀಡಿತ್ತು. ಆದರೆ ರಾಜೀವ್ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಅವರು ಬಾರಾಸಾತ್ ವಿಶೇಷ ನ್ಯಾಯಾಲಯದಲ್ಲಿ ಅವರು ಸಲ್ಲಿಸಿದ್ದ ಅರ್ಜಿ ಇತ್ತೀಚೆಗಷ್ಟೆ ತಿರಸ್ಕೃತಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.