ನವದೆಹಲಿ: ಚುನಾವಣಾ ಪ್ರಚಾರ ಸಾಮಗ್ರಿಗಳ ಮೇಲೆ ನಮೂದಿಸಲಾಗುವ ಪಕ್ಷದ ಚಿಹ್ನೆ, ಹೆಸರು ಮತ್ತು ಘೋಷವಾಕ್ಯದ ವಿಚಾರದಲ್ಲಿ ತಾನು ನೀಡಿರುವ ನಿರ್ದೇಶನಗಳಿಗೆ ಬದ್ಧರಾಗಿರುವಂತೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಎರಡೂ ಬಣಗಳಿಗೆ ಸುಪ್ರೀಂ ಕೋರ್ಟ್ ಗುರವಾರ ಹೇಳಿದೆ.

ಮಾರ್ಚ್ 19ರಂದು ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶವನ್ನು ಪಾಲಿಸಿಲ್ಲ ಎಂದು ಆರೋಪಿಸಿ ಉಭಯ ಬಣಗಳು ಪರಸ್ಪರರ ವಿರುದ್ಧ ಅರ್ಜಿ ಸಲ್ಲಿಸಿದ್ದವು. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ನ್ಯಾಯಪೀಠವು ಅರ್ಜಿಗಳ ವಿಚಾರಣೆ ನಡೆಸಿತು.

ಚುನಾವಣಾ ಸಮಯದಲ್ಲಿ ಉಭಯ ಬಣಗಳ ನಾಯಕರು ಕೋರ್ಟ್ ಹೊರಗಡೆ ಇರಬೇಕೇ ಹೊರತು ಕೋರ್ಟ್ ಒಳಗೆ ಅಲ್ಲ ಎಂದು ನ್ಯಾಯಪೀಠ ಹೇಳಿತು.

ಮಾರ್ಚ್ 19ರಂದು ನಿರ್ದೇಶನ ನೀಡಿದ್ದ ಸುಪ್ರೀಂ ಕೋರ್ಟ್, ‘ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ– ಶರದ್ಚಂದ್ರ ಪವಾರ್’ ಎಂಬ ಹೆಸರು ಮತ್ತು ‘ತುತ್ತೂರಿ ಊದುತ್ತಿರುವ ಪುರುಷ’ನ ಚಿಹ್ನೆಯನ್ನು ಮಾತ್ರ ಚುನಾವಣಾ ಪ್ರಚಾರದಲ್ಲಿ ಬಳಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿಕೊಡಬೇಕು ಎಂದು ಶರದ್ ಬಣಕ್ಕೆ ಹೇಳಿತ್ತು. ಇದೇ ವೇಳೆ, ಗಡಿಯಾರ ಚಿಹ್ನೆಯನ್ನು ತಮ್ಮ ಪಕ್ಷಕ್ಕೆ ನೀಡಿರುವ ಕುರಿತು ಸುದ್ದಿಪತ್ರಿಕೆಗಳಲ್ಲಿ ಎದ್ದುಕಾಣುವ ರೀತಿ ಜಾಹೀರಾತು ಪ್ರಕಟಿಸಬೇಕು. ಅದರೊಟ್ಟಿಗೆ ಇದೇ ಚಿಹ್ನೆ ಎನ್ನುವುದರ ಕುರಿತ ಒಕ್ಕಣೆಯೂ ದೊಡ್ಡದಾಗಿ ಕಾಣಬೇಕು ಎಂದು ಅಜಿತ್ ಪವಾರ್ ಬಣಕ್ಕೆ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.