ನವದೆಹಲಿ: ದೇಶದಾದ್ಯಂತ ಜನಸಂಖ್ಯಾ ನಿಯಂತ್ರಣ ನೀತಿ ಮತ್ತು ಎರಡು ಮಕ್ಕಳ ನಿಯಮ ಜಾರಿಗೊಳಿಸಲುಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಅಭಯ್ ಎಸ್. ಓಕಾ ಅವರಿದ್ದ ಪೀಠವು, ಇದನ್ನು ಕಾನೂನು ಆಯೋಗಕ್ಕೆ ಶಿಫಾರಸು ಮಾಡುವಂತೆ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಪಿಐಎಲ್‌ನಲ್ಲಿಸಲ್ಲಿಸಿದ್ದ ಕೋರಿಕೆಯನ್ನೂ ತಿರಸ್ಕರಿಸಿತು.

‘ಈ ಸಾಮಾಜಿಕ ಸಮಸ್ಯೆಯನ್ನು ಸರ್ಕಾರ ನೋಡಿಕೊಳ್ಳಲಿದೆ. ಆದಾಗ್ಯೂ, ದೇಶದಲ್ಲಿ ಜನಸಂಖ್ಯೆ ಬೆಳವಣಿಗೆ ಇಳಿಮುಖದಲ್ಲಿದೆ. ಅಷ್ಟಕ್ಕೂ ನ್ಯಾಯಾಲಯ ಹಸ್ತಕ್ಷೇಪ ಮಾಡುವಂತಹ ಸಮಸ್ಯೆ ಇದಲ್ಲ. ನಮಗೆ ಮಾಡಲು ಇದಕ್ಕಿಂತಲೂ ಅತ್ಯುತ್ತಮ ಕೆಲಸಗಳು ಬಾಕಿ ಇವೆ’ ಎಂದು ಪೀಠ ಮೌಖಿಕವಾಗಿ ಹೇಳಿದೆ.

‘ನಿಮಗೆ ಪ್ರಚಾರ ಬೇಕಾಗಿದೆ. ಪ್ರಚಾರ ಕೊಡುವುದು ನಮ್ಮ ಕೆಲಸವಲ್ಲ. ಈ ಅರ್ಜಿಯನ್ನು ನಾವು ಮುಂದುವರಿಸುವುದಿಲ್ಲ’ ಎಂದು ಪೀಠವು, ಅರ್ಜಿದಾರರಿಗೆ ಖಡಕ್ಕಾಗಿ ಹೇಳಿತು.

ಕೇಂದ್ರ ಸರ್ಕಾರ ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಜನಸಂಖ್ಯೆ ಏರಿಕೆ ನಿಯಂತ್ರಿಸಲು ನಾವು ಏನೆಲ್ಲಾ ಮಾಡಬಹುದು ಅದೆಲ್ಲವನ್ನೂ ಮಾಡುತ್ತಿದ್ದೇವೆ’ ಎಂದು ಪೀಠಕ್ಕೆ ತಿಳಿಸಿದರು.

ದೆಹಲಿ ಹೈಕೋರ್ಟ್ ತೀರ್ಪು ಅನ್ನೂ ಪಿಐಎಲ್‌ನಲ್ಲಿ ಪ್ರಶ್ನಿಸಿದ್ದ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರ ವಾದವನ್ನು ಪೀಠವು ಪುರಸ್ಕರಿಸಲಿಲ್ಲ. ಈ ವಿಷಯದಲ್ಲಿ ಯಾವುದೇ ಆದೇಶ ಅಥವಾ ತೀರ್ಪನ್ನು ಹೊರಡಿಸುವುದಿಲ್ಲವೆಂದು ಪೀಠ ಹೇಳಿತು.ಆಗ ಅಶ್ವಿನಿ ಕುಮಾರ್ ಅರ್ಜಿ ಹಿಂಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.