ನವದೆಹಲಿ: ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿಸಲಾಗಿರುವ ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ ಅವರ ಗೃಹಬಂಧನ ಆದೇಶದ ಜಾರಿಗೆ ಇದ್ದ ಅಡ್ಡಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೊಡೆದುಹಾಕಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವುದಕ್ಕೆ ನ್ಯಾಯಾಲಯವು ವಿನಾಯಿತಿ ನೀಡಿದೆ.

ಗೃಹಬಂಧನ ಜಾರಿಗಾಗಿ ಕ್ರಿಮಿನಲ್ ಮ್ಯಾನುಯಲ್ ಪ್ರಕಾರ ಸಲ್ಲಿಸಬೇಕಾದ ಪ್ರಮಾಣ ಪತ್ರಗಳು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ನವಲಖಾ ಅವರಿಗೆ ಸುಪ್ರೀಂ ಕೋರ್ಟ್ ನ.10ರಂದು ಹೇಳಿತ್ತು.

ಈ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಆರು ವಾರಗಳು ಬೇಕಾಗಬಹುದು ಎಂದು ನವಲಖಾ ಪರ ವಕೀಲರಾದ ನಿತ್ಯಾ ರಾಮಕೃಷ್ಣ ಮತ್ತು ಶದಾನ್ ಫರಸತ್ ಅವರು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರಿಗೆ ತಿಳಿಸಿದರು.

ವಕೀಲರ ಮನವಿಯನ್ನು ಹಾಗೂ ಸಂದರ್ಭವನ್ನು ಗಮನಿಸಿದ ನ್ಯಾಯಮೂರ್ತಿ, ‘ನ.10ರಂದು ನಾವು ನೀಡಿದ್ದ ಗೃಹಬಂಧನ ಆದೇಶದ ಪ್ರಯೋಜವು ಅವರಿಗೆ ದೊರೆಯುವುದಕ್ಕಾಗಿ ಲಭ್ಯವಿಲ್ಲದ ದಾಖಲೆಗಳನ್ನು ಸಲ್ಲಿಸುವುದಕ್ಕೆ ವಿನಾಯಿತಿ ನೀಡಲಾಗುವುದು’ ಎಂದರು.

ಎರಡು ಲಕ್ಷ ಮೌಲ್ಯದ ಸ್ಥಳೀಯ ಭದ್ರತೆ ಒದಗಿಸುವಂತೆ ನ್ಯಾಯಾಲವು ಸೂಚನೆ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.