ಮುಂಬೈ: ಸೇನೆಗೆ ಸಂಬಂಧಿಸಿದ ಮತ್ತು ಇತರ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಯಾದ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್‌ಗೆ (ಐಎಸ್‌ಐ) ರವಾನೆ ಮಾಡುತ್ತಿದ್ದ ಆರೋಪದ ಮೇಲೆ ಆರು ವರ್ಷಗಳ ಕೆಳಗೆ ಬಂಧನಕ್ಕೊಳಗಾಗಿದ್ದ ನಿಶಾಂತ್ ಅಗರ್ವಾಲ್‌ಗೆ ನಾಗ್ಪುರದ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆಯನ್ನು ವಿಧಿಸಿ ಸೋಮವಾರ ಆದೇಶಿಸಿದೆ.

ಬ್ರಹ್ಮೋಸ್ ಏರೊಸ್ಪೇಸ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆಯಲ್ಲಿ ಕಿರಿಯ ವಿಜ್ಞಾನಿಯಾಗಿದ್ದ ನಿಶಾಂತ್ ಅಗರ್ವಾಲ್ ತಮ್ಮ ಸಂಸ್ಥೆಯ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿ ಕುರಿತ ತಾಂತ್ರಿಕ ಮಾಹಿತಿಯನ್ನು ಸೋರಿಕೆ ಮಾಡಿದ್ದ ಆರೋಪ ಹೊತ್ತಿದ್ದರು.

ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ದಳ ಮತ್ತು ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರ ತಂಡವು 2018ರ ಅಕ್ಟೋಬರ್‌ನಲ್ಲಿ ನಿಶಾಂತ್‌ನನ್ನು ಬಂಧಿಸಿತ್ತು.

ಕ್ರಿಮಿನಲ್ ಪ್ರಕಿಯಾ ಸಂಹಿತೆಯ ಸೆಕ್ಷನ್ 235 ಅಡಿ ನಿಶಾಂತ್ ಅವರ ಅಪರಾಧವನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಂ.ವಿ. ದೇಶಪಾಂಡೆ ಅವರು ಸಾಬೀತುಪಡಿಸಿದರು. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿದರು. ಒಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ, ಮತ್ತೊಂದರಲ್ಲಿ 14 ವರ್ಷಗಳ ಕಠಿಣ ಶಿಕ್ಷೆ ಮತ್ತು 3,000 ದಂಡ ವಿಧಿಸಿದರು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಕುರಿತ ಮಾಹಿತಿಗಳನ್ನು ಆತ ಐಎಸ್‌ಐಗೆ ರವಾನೆ ಮಾಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.