ನವದೆಹಲಿ:ಐದು ದಶಕಗಳಲ್ಲಿ ಭಾರತದ ಕರಾವಳಿಯ ಸಮುದ್ರ ಮಟ್ಟ 8.5 ಸೆಂ.ಮೀನಷ್ಟು ಹೆಚ್ಚಳವಾಗಿದೆ ಎಂದು ಪರಿಸರ ಸಚಿವ ಬಾಬುಲ್ ಸುಪ್ರಿಯೊ ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ಹವಾಮಾನ ವೈಪರೀತ್ಯದಿಂದ ಆಗುತ್ತಿರುವ ಸಮುದ್ರ ಮಟ್ಟ ಹೆಚ್ಚಳದ ಪ್ರಮಾಣವನ್ನು ಖಚಿತವಾಗಿ ಹೇಳಲಾಗದು ಎಂದು ಅವರು ಲಿಖಿತ ಉತ್ತರ ನೀಡಿದ್ದಾರೆ.

‘ದೇಶದ ಕರಾವಳಿಯ ಸಮುದ್ರ ಮಟ್ಟವು ವರ್ಷಕ್ಕೆ ಸುಮಾರುಸರಾಸರಿ 1.70 ಮಿ.ಮೀನಷ್ಟು ಹೆಚ್ಚಿದೆ ಎಂದು ಪರಿಗಣಿಸಲಾಗಿದ್ದು, 50 ವರ್ಷಗಳಲ್ಲಿ 8.5 ಸೆಂ.ಮೀ ಹೆಚ್ಚಳವಾಗಿದೆ’ ಎಂದು ಅವರು ಹೇಳಿದ್ದಾರೆ.

ಹಿಂದೂ ಮಹಾಸಾಗರದ ಉತ್ತರ ಭಾಗವು ದಶಕದ ಅವಧಿಯಲ್ಲಿ (2003-2013) ವರ್ಷಕ್ಕೆ 6.1 ಮಿ.ಮೀ ದರದಲ್ಲಿ ಹೆಚ್ಚಳವಾಗಿದೆ ಎಂಬ ಅಂಶವು ಉಪಗ್ರಹ ಆಧಾರಿತ ದತ್ತಾಂಶದಿಂದ ಗೊತ್ತಾಗಿದೆ ಎಂದು ಅವರು ಪ್ರಸ್ತಾಪಿಸಿದ್ದಾರೆ.

ಸುನಾಮಿ, ಚಂಡಮಾರುತ, ಪ್ರವಾಹ ಮತ್ತು ಭೂ ಸವೆತ ಸೇರಿದಂತೆ ಹಲವು ಕಾರಣಗಳಿಂದಾಗಿ ಸಮುದ್ರ ಮಟ್ಟ ಹೆಚ್ಚುತ್ತಿದೆ. ಇದಕ್ಕೆ ಹವಾಮಾನ ವೈಪರೀತ್ಯವೊಂದೇ ಕಾರಣ ಎಂದು ಹೇಳಲಾಗದು ಎಂದು ಅವರು ತಿಳಿಸಿದ್ದಾರೆ.

ಉದಾಹರಣೆಗೆ, ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬಾರ್ನಲ್ಲಿ ದೊಡ್ಡ ಪ್ರಮಾಣದ ಭೂ ಕುಸಿತದಿಂದ ಸಮುದ್ರ ಮಟ್ಟ ಹೆಚ್ಚಾಗಿದೆ. ಅಂತೆಯೇ ಕಾಂಡ್ಲಾ, ಹಾಲ್ಡಿಯಾ ಮತ್ತು ಪೋರ್ಟ್ಬ್ಲೇರ್ನಲ್ಲೂ ಆಗಿರಬಹುದು ಎಂದು ಅವರು ಹೇಳಿದ್ದಾರೆ.

ಇಂಗಾಲದ ಹೊರಸೂಸುವಿಕೆಯನ್ನು ಪರೀಕ್ಷಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ, ಜಾಗತಿಕ ಸಮುದ್ರ ಮಟ್ಟ ಕನಿಷ್ಠ 1 ಮೀಟರ್ನಷ್ಟು ಹೆಚ್ಚಳವಾಗಲಿದೆ. ಆಗ ಮುಂಬೈ ಮತ್ತು ಕೋಲ್ಕತ್ತ ಸೇರಿದಂತೆ ನೂರಾರು ನಗರಗಳು 2100ರ ವೇಳೆಗೆ ಮುಳುಗಡೆಯಾಗಲಿವೆ ಎಂದುಹವಾಮಾನ ಬದಲಾವಣೆಯ ಕುರಿತು ಇತ್ತೀಚೆಗೆ ವಿಶ್ವಸಂಸ್ಥೆಯ ‘ಹವಾಮಾನ ಬದಲಾವಣೆ ಕುರಿತ ಅಂತರ್ ಸರ್ಕಾರ ಸಮಿತಿ’(ಐಪಿಸಿಸಿ) ಪ್ರಕಟಿಸಿದ್ದ ವರದಿ ಎಚ್ಚರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.