ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೈಬರ್ ಅಪರಾಧ ತಡೆಗೆ ಕೇಂದ್ರ ಸ್ಥಾಪನೆ: ಅಮಿತ್ ಶಾ

'5 ವರ್ಷಗಳಲ್ಲಿ 5000 ‘ಸೈಬರ್ ಕಮಾಂಡೊ’ಗಳ ನಿಯೋಜನೆಗೆ ಕ್ರಮ'
Published : 10 ಸೆಪ್ಟೆಂಬರ್ 2024, 16:26 IST
Last Updated : 10 ಸೆಪ್ಟೆಂಬರ್ 2024, 16:26 IST
ಫಾಲೋ ಮಾಡಿ
Comments
‘ಶಂಕಿತರ ಮಾಹಿತಿ ಸಂಗ್ರಹ’
ರಾಷ್ಟ್ರೀಯ ಸೈಬರ್‌ ಕ್ರೈಮ್‌ ರಿಪೋರ್ಟಿಂಗ್ ಪೋರ್ಟಲ್‌ (ಎನ್‌ಸಿಆರ್‌ಪಿ) ಆಧರಿಸಿ ಶಂಕಿತರ ಮಾಹಿತಿ ಸಂಗ್ರಹಿಸಲಾಗುವುದು ಎಂದು ಸಚಿವ ಅಮಿತ್‌ ಶಾ ತಿಳಿಸಿದರು. ಈ ಕಾರ್ಯಕ್ರಮದಡಿ ಸೈಬರ್ ಕಮಾಂಡೊಗಳ ವಿಶೇಷ ಘಟಕವು ಇರಲಿದೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದರ ಘಟಕ ಸ್ಥಾಪನೆಯಾಗಲಿದೆ. ದೇಶದಾದ್ಯಂತ ಸೈಬರ್ ಭದ್ರತೆಗೆ ಎದುರಾಗುವ ಬೆದರಿಕೆಯನ್ನು ಎದುರಿಸುವುದು ಇದರ ಗುರಿ. ತರಬೇತಿ ಪಡೆದ ಸೈಬರ್ ಕಮಾಂಡೊಗಳು ಡಿಜಿಟಲ್‌ ಭದ್ರತೆಗೆ ಸಂಬಂಧಿಸಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ನೆರವು ಒದಗಿಸುವರು ಎಂದು ಹೇಳಿಕೆಯು ವಿವರಿಸಿದೆ. ‘ಈಗ ‘ಅಗತ್ಯವಿದ್ದರೆ ಮಾಹಿತಿ ಪಡೆಯಿರಿ’ ಎಂಬ ನಿಲುವಿತ್ತು. ಈಗ ‘ಮಾಹಿತಿ ಹಂಚಿಕೊಳ್ಳುವುದು ಕರ್ತವ್ಯ’ವಾಗಲಿದೆ. ಸಮನ್ವಯ ವೇದಿಕೆಯು ಈ ಕಾರ್ಯವನ್ನು ನಿಭಾಯಿಸಲಿದೆ’ ಎಂದು ಅಮಿತ್ ಶಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT