ನವದೆಹಲಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ, ನಿವೃತ್ತ ಜನರಲ್ ಪರ್ವೇಜ್ ಮುಷರಫ್ ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಒಮ್ಮೆ ಭಾರತದ ಬದ್ಧ ವೈರಿಯಾಗಿದ್ದ ಅವರು, 2002 ರಿಂದ 2007ರ ಅವಧಿಯಲ್ಲಿ ಶಾಂತಿಯ ನಿಜವಾದ ಶಕ್ತಿಯಾಗಿದ್ದರು’ ಎಂದು ಹೇಳಿದ್ದಾರೆ.

ತರೂರ್ ಅವರ ಈ ಹೇಳಿಕೆಗಾಗಿ ಬಿಜೆಪಿಯು ತೀವ್ರ ತರಾಟೆಗೆ ತೆಗೆದುಕೋಂಡಿದೆ. ‘ಕಾಂಗ್ರೆಸ್ ಪಕ್ಷವು ಪಾಕಿಸ್ತಾನದ ಧ್ಯಾನದಲ್ಲಿ ತೊಡಗಿದೆ’ ಎಂದು ಬಿಜೆಪಿ ವಕ್ತಾರ ಶೆಹನಾಜ್ ಪೂನಾವಾಲಾ ಟೀಕಿಸಿದ್ದಾರೆ.

‘ಜನರಲ್ ಪರ್ವೇಜ್ ಮುಷರಫ್ ಅವರು ಕಾರ್ಗಿಲ್‌ನ ರೂವಾರಿ. ಸರ್ವಾಧಿಕಾರಿ. ಹಲವು ಗಂಭೀರ ಅಪರಾಧಗಳಲ್ಲಿ ಅಪರಾಧಿ. ತಾಲಿಬಾನ್ ಮತ್ತು ಒಸಾಮರನ್ನು ಕ್ರಮವಾಗಿ ಸೋದರರು, ಹೀರೋಗಳು ಎಂದಿದ್ದವರು. ಇಂಥವರನ್ನು ಕಾಂಗ್ರೆಸ್ ಪಕ್ಷವು ಹೊಗಳುತ್ತಿದೆ’ ಎಂದು ಪೂನಾವಾಲಾ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.