ನವದೆಹಲಿ: ಕಾಂಗ್ರೆಸ್ ನೇತಾರ ಶಶಿ ತರೂರ್ ಅವರ ತಾಲೀಬಾನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನೇತಾರ ಸುಬ್ರಮಣಿಯನ್ ಸ್ವಾಮಿ, ಶಶಿ ತರೂರ್ ಅವರ ಗರ್ಲ್ಫ್ರೆಂಡ್ ಪಾಕಿಸ್ತಾನದಲ್ಲಿರುವುದರಿಂದ ಅವರು ಅಲ್ಲಿ ಹೆಚ್ಚು ಆರಾಮವಾಗಿರಬಹುದು ಎಂದಿದ್ದಾರೆ.

ತಿರುವನಂತಪುರಂನಲ್ಲಿ ಮಂಗಳವಾರ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ತರೂರ್, ಅವರು ನನ್ನಲ್ಲಿ ಪಾಕಿಸ್ತಾನಕ್ಕೆ ಹೋಗು ಎಂದು ಹೇಳುತ್ತಿದ್ದಾರೆ.ಹಾಗೆ ಹೇಳಲು ಅವರಿಗೇನು ಹಕ್ಕಿದೆ? ಅವರಂತೆಯೇ ನಾನೊಬ್ಬ ಹಿಂದೂ, ನನಗೆ ಈ ದೇಶದಲ್ಲಿ ಬದುಕುವ ಹಕ್ಕು ಇಲ್ಲವೇ? ಅವರು ಹಿಂದೂಯಿಸಂನಲ್ಲಿ ತಾಲೀಬಾನ್ ಶುರು ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದ್ದರು.

ತರೂರ್ ಹೇಳಿಕೆ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಸ್ವಾಮಿ, ತಾಲೀಬಾನ್ ನಿಮ್ಮನ್ನು ಇಲ್ಲಿಂದ ಹೊರಹೋಗುವಂತೆ ಮಾಡುತ್ತದೆ. ನಾವು ನಿಮ್ಮಲ್ಲಿ (ಶಶಿ ತರೂರ್) ಹೊರಹೋಗಿ ಎಂದು ಹೇಳುತ್ತಿಲ್ಲ.ತರೂರ್ ಅವರ ಗರ್ಲ್ಫ್ರೆಂಡ್ ಪಾಕಿಸ್ತಾನದಲ್ಲಿರುವುದರಿಂದ ಅವರು ಅಲ್ಲಿಆರಾಮವಾಗಿರಬಹುದು.

ಇಲ್ಲಿ ತರೂರ್ ತಾನೊಬ್ಬ ಹಿಂದೂ ಎಂದು ಹೇಳುತ್ತಿದ್ದಾರೆ.ಆದರೆ ಅವರು ನಿಗೂಢ ಸಾವನ್ನಪ್ಪಿದ ಅವರ ಹಿಂದೂ ಪತ್ನಿ ಪರವಾಗಿ ಯಾವತ್ತೂ ನಿಂತಿಲ್ಲ. ತರೂರ್ ಅವರು ಪ್ರತಿನಿತ್ಯ ನೀಡುವ ಈ ರೀತಿಯ ಹೇಳಿಕೆಗಳಿಂದ ಪಾಕಿಸ್ತಾನ ಲಾಭ ಪಡೆಯುತ್ತದೆ.ಭಾರತದ ಬಗ್ಗೆ ಸಂಸದರೊಬ್ಬರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಬಿಜೆಪಿ ಇನ್ನೊಮ್ಮೆ ಅಧಿಕಾರಕ್ಕೇರಿದರೆ ಭಾರತ ಹಿಂದೂ ಪಾಕಿಸ್ತಾನ್ ಆಗುತ್ತದೆ ಎಂದು ಹೇಳಿಕೆ ಶಶಿ ತರೂರ್ ವಿವಾದಕ್ಕೀಡಾಗಿದ್ದರು. ಎರಡು ದಿನಗಳ ಹಿಂದೆ ಶಶಿ ತರೂರ್ ಅವರ ಕಚೇರಿ ಮೇಲೆ ದಾಳಿ ನಡೆಸಿದ ಯುವ ಮೋರ್ಚಾ ಕಾರ್ಯಕರ್ತರು ಗೋಡೆ, ಬಾಗಿಲುಗಳಿಗೆ ಮಸಿ ಬಳಿದು, ಪಾಕಿಸ್ತಾನಕ್ಕೆ ಹೋಗಿ ಎಂಬ ಬ್ಯಾನರ್ ತೂಗುಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.