ರಾಜಸ್ಥಾನದ ಜೈಸಲ್ಮೇರ್ ಬಳಿ ಇರುವ ಪೋಖ್ರಾನ್‌ನಲ್ಲಿ ಶನಿವಾರ ಹಗಲು ಮತ್ತು ರಾತ್ರಿ ಭಾರತದ ವಾಯುಪಡೆಯ ಶಕ್ತಿ ಪ್ರದರ್ಶನ ನಡೆಯಿತು. ಈ ’ವಾಯು ಶಕ್ತಿ‘ಯಲ್ಲಿ 121 ಯುದ್ಧವಿಮಾನಗಳ ಬಲವನ್ನು ಪ್ರದರ್ಶಿಸಲಾಯಿತು. ’ಆತ್ಮನಿರ್ಭರ ಭಾರತ‘ದ ಸಂಕೇತವಾದ ದೇಶೀಯ ಯುದ್ಧವಿಮಾನ ತೇಜಸ್ ಮತ್ತು ಹೆಲಿಕಾಪ್ಟರ್‌ಗಳಾದ ಪ್ರಚಂಡ್, ಧ್ರುವ್ ಕೂಡ ತಮ್ಮ ಶಕ್ತಿ ಪ್ರದರ್ಶಿಸಿದವು. ರಫೇಲ್, ಮಿರೇಜ್–2000, ಸುಖೋಯ್–30 ಎಂಕೆಐನಂತಹ ಅಂತರರಾಷ್ಟ್ರೀಯ ಯುದ್ಧವಿಮಾನಗಳ ಪ್ರದರ್ಶನವೂ ನಡೆಯಿತು. ಪಾಕಿಸ್ತಾನದ ಗಡಿ ಭಾಗದಲ್ಲಿ ಈ ಸಮರಾಭ್ಯಾಸ ನಡೆದರೆ, ಪೂರ್ವ ಲಡಾಖ್‌ನಲ್ಲಿ ಸಂಘರ್ಷದಲ್ಲಿ ತೊಡಗಿರುವ ಚೀನಾಕ್ಕೂ ಈ ಪ್ರದರ್ಶನದ ಮೂಲಕ ಭಾರತವು ಎಚ್ಚರಿಕೆಯ ಸಂದೇಶ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.