ಮುಂಬೈ: ಗಾಯಕ ದಿವಂಗತ ಸಿಧು ಮೂಸೇವಾಲ ಪೋಷಕರು ಇದೇ ಮೊದಲ ಬಾರಿಗೆ ತಮ್ಮ ಎರಡನೇ ಮಗುವಿನ ಮುಖವನ್ನು ಅನಾವರಣ ಮಾಡಿದ್ದಾರೆ.

ಮಗುವಿಗೆ ಶುಭ್ದೀಪ್ ಎಂದು ನಾಮಕರಣ ಮಾಡಿರುವ ಅವರು, ಮಗುವಿನ ತಲೆಗೆ ಪಗಡಿಯನ್ನು ಸುತ್ತಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಿಧು ಮೂಸೇವಾಲ ಮೃತಪಟ್ಟು ಎರಡು ವರ್ಷಗಳ ಬಳಿಕೆ ಕಳೆದ ಮಾರ್ಚ್ನಲ್ಲಿ ಸಿಧು ತಾಯಿ ಚರಣ್ ಕೌರ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಬಗ್ಗೆ ಸಿಧು ತಂದೆ ಬಲ್ಕೌರ್ ಸಿಂಗ್ ತಮ್ಮ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಮಗುವಿನ ಫೋಟೊ ನೋಡಿ ಮೆಚ್ಚಿಕೊಂಡಿರುವ ಸಿಧು ಮೂಸೆವಾಲ ಅಭಿಮಾನಿಗಳು ‘ಪುಟ್ಟ ಸಿಧು’ ಎಂದು ಕರೆದಿದ್ದಾರೆ.

‘ಶುಭ್ದೀಪ್ ಮೂಲಕ ಸಿಧುನೇ ಜನಿಸಿರುವ ಹಾಗಿದೆ’ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

2022ರ ಮೇ 9ರಂದು ಆರು ಜನ ದುಷ್ಕರ್ಮಿಗಳು ನಡೆಸಿದ್ದ ಗುಂಡಿನ ದಾಳಿಯಲ್ಲಿ ಗಾಯಕ ಸಿಧು ಮೂಸೆವಾಲಾ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.