ಬೆಂಗಳೂರು: ದೇಶದಲ್ಲಿ ಆಗಸ್ಟ್‌ನಿಂದ ಡಿಸೆಂಬರ್ ಅವಧಿಯಲ್ಲಿ 200 ಕೋಟಿಗೂ ಅಧಿಕ ಡೋಸ್ ಕೋವಿಡ್ 19 ಲಸಿಕೆ ಲಭ್ಯವಾಗಲಿದೆ. ಈಗಾಗಲೇ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆ ಉತ್ಪಾದನೆ ಹೆಚ್ಚಿಸಲಾಗಿದ್ದು, ಅದರ ಜತೆಗೇ ಇನ್ನು ಆರು ಲಸಿಕೆಗಳು ದೇಶದಲ್ಲಿ ದೊರೆಯಲಿದೆ.

ಸ್ಪುಟ್ನಿಕ್-ವಿ ಲಸಿಕೆ

ರಷ್ಯಾ ಮೂಲದ ಈ ಲಸಿಕೆ ಈಗಾಗಲೇ ದೇಶವನ್ನು ಪ್ರವೇಶಿಸಿದ್ದು, ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ. ವ್ಯಾಕ್ಸಿನ್ ಪ್ರತಿ ಡೋಸ್ ಬೆಲೆ ₹995.40 ಇರಲಿದೆ.

ಝೈಕೊವ್-ಡಿ

ಅಹಮದಾಬಾದ್ ಮೂಲದ ಫಾರ್ಮಸಿ ಕಂಪನಿ ಝೈಡಸ್ ಕ್ಯಾಡಿಲಾ ಜೂನ್‌ನಲ್ಲಿ ಕೋವಿಡ್ ಲಸಿಕೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಬಯೋ-ಇ-ಸಬ್ ವ್ಯಾಕ್ಸಿನ್

ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಕಂಪನಿ, ಟೆಕ್ಸಾಸ್‌ನ ಬಾಯ್ಲರ್ ಕಾಲೇಜ್ ಆಫ್ ಮೆಡಿಸಿನ್ ಸಹಯೋಗದಲ್ಲಿ ಬಯೋ ಇ ಸಬ್ ವ್ಯಾಕ್ಸಿನ್ ಅನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಿದೆ.

ನೋವಾವ್ಯಾಕ್ಸ್

ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವೊವ್ಯಾಕ್ಸ್ ಹೆಸರಿನ ನೋವಾವ್ಯಾಕ್ಸ್ ಲಸಿಕೆ ಅಭಿವೃದ್ಧಿಪಡಿಸಿದ್ದು, ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬಿಬಿ ನಾಸಲ್ ವ್ಯಾಕ್ಸಿನ್

ಭಾರತ್ ಬಯೋಟೆಕ್, ಸೂಜಿರಹಿತ ಮತ್ತು ಒಂದೇ ಡೋಸ್‌ನಲ್ಲಿ ತೆಗೆದುಕೊಳ್ಳಬಹುದಾದ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಡಿಸೆಂಬರ್‌ನಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ.

ಸ್ಪುಟ್ನಿಕ್–ವಿ ಲಸಿಕೆ: ಜೂನ್ ಮಧ್ಯಭಾಗದಿಂದ ಗ್ರಾಹಕರಿಗೆ ಲಭ್ಯ ಎಂದ ಡಾ. ರೆಡ್ಡೀಸ್

ಜಿನೋವಾ ಎಂಆರ್‌ಎನ್‌ಎ ಲಸಿಕೆ

ಫೈಜರ್ ಮತ್ತು ಮೋಡರ್ನಾ ಲಸಿಕೆಯಂತೆಯೇ, ಪುಣೆಯ ಜಿನೋವಾ ಬಯೋಫಾರ್ಮಸ್ಯೂಟಿಕಲ್ಸ್ ಒಂದು ಮೆಸೆಂಜರ್ ಆರ್‌ಎನ್‌ಎ ಲಸಿಕೆ ಅಭಿವೃದ್ಧಿಪಡಿಸುತ್ತಿದೆ.

ಕೋವಿಡ್, ಕಪ್ಪು ಶಿಲೀಂಧ್ರ ಮತ್ತು ಆಂಫೊಟೆರಿಸಿನ್–ಬಿ:ಇಲ್ಲಿದೆ ತಿಳಿಯಬೇಕಾದ ಮಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.