ಪಟ್ನಾ: ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವುದು ಎನ್ಡಿಎ ಮೈತ್ರಿಕೂಟದಲ್ಲೇ ಕೆಲವರಿಗೆ ಇಷ್ಟವಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆಯ ರಾಜ್ಯ ಖಾತೆ ಸಚಿವ ಉಪೇಂದ್ರ ಕುಶ್ವಾಹ ಹೇಳಿದ್ದಾರೆ. ಇವರು, ಎನ್ಡಿಎ ಮಿತ್ರಪಕ್ಷ ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಆರ್ಎಲ್ಎಸ್ಪಿ) ಮುಖ್ಯಸ್ಥರೂ ಆಗಿದ್ದಾರೆ.

ವರದಿಗಾರರ ಜತೆ ಮಾತನಾಡಿದ ಅವರು, ಮೋದಿ ಮತ್ತೆ ಪ್ರಧಾನಿಯಾಗುವುದನ್ನು ಬಯಸದ ಕೆಲವು ಜನರು ಎನ್ಡಿಎಯಲ್ಲಿದ್ದಾರೆ ಎಂದರು. ಆದರೆ, ಹೆಸರು ಬಹಿರಂಗಪಡಿಸಲಿಲ್ಲ. ಅವರು ಬಿಹಾರದವರೇ ಎಂದು ಕೇಳಲಾದ ಪ್ರಶ್ನೆಗೆ, ‘ಎನ್ಡಿಎಯವರು’ ಎಂದಷ್ಟೇ ಉತ್ತರಿಸಿದರು.

2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಆರ್ಎಲ್ಎಸ್ಪಿಗೆ ಕೇವಲ 2 ಸ್ಥಾನಗಳನ್ನಷ್ಟೇ ಎನ್ಡಿಎ ನೀಡಲಿದೆ ಎಂಬ ವರದಿಯನ್ನು ಅವರು ತಳ್ಳಿಹಾಕಿದರು. ಸೀಟು ಹಂಚಿಕೆಗೆ ಸಂಬಂಧಿಸಿ ಇದುವರೆಗೂ ಮಾತುಕತೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕುಶ್ವಾಹ ಅವರು ಇಂದಿನಿಂದ ಬಿಹಾರದಲ್ಲಿ ಜಿಲ್ಲಾ ಮಟ್ಟದ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ.

ಇನ್ನಷ್ಟು...

* ಏಕಾಂಗಿ ಸ್ಪರ್ಧೆಗೂ ನಿತೀಶ್ ಕುಮಾರ್ ಸಿದ್ಧ, ಇದರಿಂದ ಬಿಜೆಪಿಗೇ ನಷ್ಟ ಎಂದ ಜೆಡಿಯು

* ಬಿಹಾರ: ಎನ್ಡಿಎ ಮಿತ್ರ ಪಕ್ಷಗಳಲ್ಲಿ ಸ್ಥಾನ ಹಂಚಿಕೆಗೆ ಪೈಪೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.