ನವದೆಹಲಿ: ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆ ತನ್ನ 150 ಸಿಬ್ಬಂದಿಗೆ ವೇತನ ರಹಿತ ಮೂರು ತಿಂಗಳು ಕಡ್ಡಾಯ ರಜೆ ನೀಡಿದೆ.

ಹಣಕಾಸು, ಕಾನೂನು ಮತ್ತು ಗುತ್ತಿಗೆದಾರರಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಸಂಸ್ಥೆ, ವಿಮಾನಗಳ ಹಾರಾಟದ ಸಂಖ್ಯೆಯನ್ನೂ ಕಡಿತಗೊಳಿಸಿದೆ. ಪ್ರಸ್ತುತ ಸ್ಪೈಸ್‌ಜೆಟ್‌ನ ಸುಮಾರು 22 ವಿಮಾನಗಳು ಮಾತ್ರ ಕಾರ್ಯಾಚರಣೆಯಲ್ಲಿವೆ ಎಂದು ವರದಿಯಾಗಿದೆ.

ಸಂಸ್ಥೆಯ ದೀರ್ಘಾವದಿ ಸ್ಥಿರತೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಮೂರು ತಿಂಗಳ ಬಳಿಕ ಸಿಬ್ಬಂದಿಯನ್ನು ಕೆಲಸಕ್ಕೆ ವಾಪಸ್ ಕರೆಸಿಕೊಳ್ಳಲಾಗುವುದು, ಕೆಲಸಕ್ಕೆ ಮರಳಿದ ನಂತರ ಅವರು ಈ ಮೊದಲಿದ್ದ ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳನ್ನು ಪಡೆಯಲಿದ್ದಾರೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಸದ್ಯ ವಿಮಾನಯಾನ ಸಂಸ್ಥೆಯು ತನ್ನ ಆರ್ಥಿಕ ಸಂಕಷ್ಟದ ಹೊರೆ ಕಡಿಮೆ ಮಾಡಲು ಹಣ ಹೊಂದಿಸಲು ನೋಡುತ್ತಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.