ನವದೆಹಲಿ: ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನರೇಂದ್ರ ಭಾಯ್ ಜೀ' ಎಂದು ಸಂಬೋಧಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸುಪ್ರೀಂ ಕೋರ್ಟ್ ಬಾರ್ ಅಸೋಶಿಯೇಷನ್‌ನ ಅಧ್ಯಕ್ಷ ಕಪಿಲ್, ತಮ್ಮ ಭಾಷಣದ ಆರಂಭದಲ್ಲಿ ಪ್ರಧಾನಿ ಅವರನ್ನು ಉಲ್ಲೇಖಿಸುತ್ತಾ, 'ನಿಮ್ಮನ್ನು ನರೇಂದ್ರ ಭಾಯ್ ಜೀ ಎಂದು ಕರೆಯುವ ಸ್ವಾತಂತ್ರ್ಯವನ್ನು ತೆಗೆದುಕೊಳ್ಳುತ್ತೇನೆ' ಎಂದು ಹೇಳಿದರು.

ಈ ವೇಳೆ ಪ್ರಧಾನಿ ಮೋದಿ ಅವರು ನಗುಮುಖದಿಂದಲೇ ತಲೆಯಾಡಿಸಿದರು.

ಈ ವಿಡಿಯೊವನ್ನು ಸುದ್ದಿಸಂಸ್ಥೆ 'ಎಎನ್‌ಐ' ಹಂಚಿಕೊಂಡಿದೆ.

ತಮ್ಮ ಭಾಷಣದಲ್ಲಿ ಭಾರತ ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಕಪಿಲ್ ಸಿಬಲ್ ಒತ್ತಿ ಹೇಳಿದರು.

ದುರ್ಬಲ ಅಡಿಪಾಯ ಹೊಂದಿರುವ ಯಾವುದೇ ರಚನೆಯು ಕ್ರಮೇಣ ಪತನಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.

ಸುಪ್ರೀಂ ಕೋರ್ಟ್ ಸ್ಥಾಪನೆಯಾಗಿ 75 ವರ್ಷದ ಭಾಗವಾಗಿ ಎರಡು ದಿನಗಳ ಈ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
.ಕಳೆದ 10 ವರ್ಷಗಳಲ್ಲಿ ಬಿಜೆಪಿ 'ಜಾತ್ಯತೀತ' ಅಥವಾ 'ನಾಗರಿಕ' ಪರ ಆಗಿರಲಿಲ್ಲ: ಸಿಬಲ್.ಎಂ.ಎಸ್. ಸ್ವಾಮಿನಾಥನ್ ಕೊಡುಗೆ ಅಚ್ಚಳಿಯದೆ ಉಳಿಯಲಿದೆ: ಪ್ರಧಾನಿ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.