ನವದೆಹಲಿ: ವಾಯು ಗುಣಮಟ್ಟ ಸುಧಾರಣೆ ಸೂಚ್ಯಂಕದಲ್ಲಿ ಗುಜರಾತ್‌ನ ಸೂರತ್ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಮಧ್ಯಪ್ರದೇಶದ ಜಬಲ್‌ಪುರ ಎರಡನೇ ಸ್ಥಾನ ಪಡೆದರೆ, ಉತ್ತರ ಪ್ರದೇಶದ ಆಗ್ರಾ ಮೂರನೇ ಸ್ಥಾನ ಪಡೆದಿದೆ.

ಜೈಪುರದಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಕೇಂದ್ರ ಪರಿಸರ ಸಚಿವಾಲಯವು ‘ಸ್ವಚ್ಛ ವಾಯು ಸಮೀಕ್ಷೆ 2024’ರ ‘ರಾಷ್ಟ್ರೀಯ ಶುದ್ಧ ಗಾಳಿ ನಗರ’ ಪ್ರಶಸ್ತಿಗಳನ್ನು ಪ್ರಕಟಿಸಿದೆ.

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಸೂರತ್, ಜಬಲ್‌ಪುರ್ ಮತ್ತು ಆಗ್ರಾ ಮೊದಲ ಮೂರು ಸ್ಥಾನಗಳನ್ನು ಗಳಿಸಿದರೆ, ಮೂರು ಲಕ್ಷದಿಂದ 10 ಲಕ್ಷದವರೆಗೆ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಫಿರೋಜಾಬಾದ್ (ಉತ್ತರ ಪ್ರದೇಶ), ಅಮರಾವತಿ (ಮಹಾರಾಷ್ಟ್ರ) ಮತ್ತು ಝಾನ್ಸಿ (ಉತ್ತರ ಪ್ರದೇಶ) ವಾಯು ಗುಣಮಟ್ಟ ಸುಧಾರಣೆ ಹೊಂದಿರುವ ನಗರಗಳೆಂದು ಗುರುತಿಸಲ್ಪಟ್ಟಿವೆ.

ಮೂರು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ರಾಯ್ ಬರೇಲಿ (ಉತ್ತರ ಪ್ರದೇಶ), ನಲ್ಗೊಂಡ (ತೆಲಂಗಾಣ) ಮತ್ತು ನಲಗಢ (ಹಿಮಾಚಲ ಪ್ರದೇಶ) ಅಗ್ರಸ್ಥಾನದಲ್ಲಿವೆ.

‘ಸ್ವಚ್ಛ ವಾಯು ಸರ್ವೇಕ್ಷಣ್’ ಯೋಜನೆಯಡಿ ಅನುಮೋದಿಸಲಾದ ಚಟುವಟಿಕೆಗಳ ಅನುಷ್ಠಾನ ಮತ್ತು ರಾಷ್ಟ್ರೀಯ ಶುದ್ಧ ಗಾಳಿ ಯೋಜನೆಯಡಿ (ಎನ್‌ಸಿಎಪಿ) ಅಡಿಯಲ್ಲಿ ನಗರಗಳಲ್ಲಿನ ಗಾಳಿಯ ಗುಣಮಟ್ಟವನ್ನು ಆಧರಿಸಿ ನಗರಗಳಿಗೆ ಕೇಂದ್ರ ಪರಿಸರ ಸಚಿವಾಲಯವು ಶ್ರೇಯಾಂಕವನ್ನು ಪ್ರತಿವರ್ಷ ಪ್ರಕಟಿಸುತ್ತದೆ.

2019ರಲ್ಲಿ ರಾಷ್ಟ್ರೀಯ ಶುದ್ಧ ಗಾಳಿ ಯೋಜನೆಯನ್ನು (ಎನ್‌ಸಿಎಪಿ) ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಈ ಯೋಜನೆಯಡಿ ವಾಯು ಮಾಲಿನ್ಯ ತಡೆಗಟ್ಟುವುದು, ಗಾಳಿ ಗುಣಮಟ್ಟ ಸುಧಾರಿಸುವುದು ಹಾಗೂ ದೂಳಿನ ಪ್ರಮಾಣ ತಗ್ಗಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.