ಜೆರುಸಲೇಂ: ದೆಹಲಿಯಲ್ಲಿರುವ ಇಸ್ರೇಲ್‌ನ ರಾಯಭಾರ ಕಚೇರಿ ಬಳಿ ಮಂಗಳವಾರ ಸಂಜೆ ಸ್ಫೋಟ ಸಂಭವಿಸಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಇಸ್ರೇಲ್ ಪ್ರಜೆಗಳು ಎಚ್ಚರಿಕೆಯಿಂದ ಇರಬೇಕು ಎಂದು ಇಸ್ರೇಲ್‌ನ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಸಲಹೆಗಳನ್ನು ನೀಡಿದೆ.

ಅಲ್ಲದೇ ಇದೊಂದು ಭಯೋತ್ಪಾದಕ ಕೃತ್ಯ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದೆ.

ಮಾರುಕಟ್ಟೆಗಳಿಗೆ, ಮಾಲ್‌ಗಳಿಗೆ ಹಾಗೂ ಜನದಟ್ಟಣೆ ಪ್ರದೇಶಗಳಿಗೆ ಹೋಗುವುದನ್ನು ಸದ್ಯ ನಿಲ್ಲಿಸಿ. ನಿಮ್ಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುವುದನ್ನು ತ್ಯಜಿಸಿ. ಬಹಿರಂಗವಾಗಿ ಇಸ್ರೇಲ್ ಪ್ರತಿನಿಧಿಸುವ, ಚಿಹ್ನೆಗಳನ್ನು ತೋರಿಸುವ ಉಡುಗೆ–ತೊಡುಗೆ, ಧ್ವಜಗಳನ್ನು ಬಳಸಬೇಡಿ ಎಂದು ಸಲಹೆಗಳನ್ನು ನೀಡಿದೆ.

ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲು, ಭಾರತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

ಮಂಗಳವಾರ ಸಂಜೆ ನಡೆದ ಘಟನೆಯಲ್ಲಿ ಯಾವುದೇ ಹಾನಿ ಮತ್ತು ಯಾರಿಗೂ ಗಾಯಗಳಾಗಿಲ್ಲ. ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಶೋಧ ನಡೆಸಿದ್ದು, ಸ್ಫೋಟದ ಅವಶೇಷ ಪತ್ತೆಯಾಗಿದೆ. ದೆಹಲಿ ಪೊಲೀಸರ ವಿಶೇಷ ಘಟಕ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖಾಧಿಕಾರಿಗಳು ಕೂಡ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ರಾಯಭಾರ ಕಚೇರಿಯ ಸಮೀಪ ಸ್ಫೋಟ ನಡೆದಿದೆ ಎಂದು ಇಸ್ರೇಲ್ ರಾಯಭಾರ ಕಚೇರಿಯ ವಕ್ತಾರ ಗುಯ್ ನಿರ್ ಖಚಿತಪಡಿಸಿದ್ದಾರೆ.
.ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟಿಸುವುದಾಗಿ ದೆಹಲಿ ಪೊಲೀಸರಿಗೆ ಬೆದರಿಕೆ ಕರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.