ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಾಯಣದ ಕತೆಗಳ ವಿವಿಧ ದೃಶ್ಯಗಳನ್ನು ಸಾರುವ ಹಲವು ಸ್ತಬ್ಧಚಿತ್ರಗಳ ಮೆರವಣಿಗೆಯೊಂದಿಗೆ ದೀಪೋತ್ಸವಕ್ಕೆ ಚಾಲನೆ ದೊರೆಯಿತು.

ಇದು ಅಯೋಧ್ಯೆಯಲ್ಲಿ ದೀಪೋತ್ಸವದ ಎಂಟನೇ ಆವೃತ್ತಿಯಾಗಿದ್ದು, ರಾಮಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಬಳಿಕ ನಡೆಯುತ್ತಿರುವ ಮೊದಲ ದೀಪಾವಳಿ.

ಸ್ತಬ್ಧಚಿತ್ರಗಳು ರಾಮಪಥದಲ್ಲಿ ಮೆರವಣಿಗೆ ಮೂಲಕ ಸಾಗಿದವು. ಈ ವೇಳೆ ದೇಶದ ವಿವಿಧ ಭಾಗದ ಶಾಸ್ತ್ರೀಯ ನೃತ್ಯ ಕಲಾವಿದರು ನೃತ್ಯ ಪ್ರಕಾರಗಳನ್ನು ಪ್ರಸ್ತುತಪಡಿಸಿದರು. ಸ್ಥಳೀಯರು ಪುಷ್ಪು ಅರ್ಪಿಸಿ ಸ್ವಾಗತಿಸಿದರು.

ಸಾಕೇತ್ ಮಹಾವಿದ್ಯಾಲಯ ನಿರ್ಮಿಸಿದ್ದ 18 ಸ್ತಬ್ಧಚಿತ್ರಗಳು, ಮಾಹಿತಿ ಇಲಾಖೆಯ 11 ಹಾಗೂ ಪ್ರವಾಸೋದ್ಯಮ ಇಲಾಖೆಯ ಏಳು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆರತಿಯೊಂದಿಗೆ ದೀಪೋತ್ಸವವನ್ನು ಬರಮಾಡಿಕೊಂಡರು. ಭಗವಾನ್ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಾನ್ ಪಾತ್ರಧಾರಿ ಕಲಾವಿದರು ಕುಳಿತಿದ್ದ ರಥವನ್ನು ಅವರು ಎಳೆದರು.

ಉತ್ತರ ಪ್ರದೇಶ ಸರ್ಕಾರವು ಸರಯೂ ನದಿ ತೀರದಲ್ಲಿ ಈ ವರ್ಷ 28 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸುವ ಯೋಜನೆ ಹೊಂದಿದೆ. ಈ ದೀಪಗಳನ್ನು ಸ್ಥಳೀಯ ಕಲಾವಿದರಿಂದ ಖರೀದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೀಪೋತ್ಸವದಲ್ಲಿ ಮ್ಯಾನ್ಮಾರ್, ನೇಪಾಳ, ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ, ಇಂಡೊನೇಷ್ಯಾದ ಕಲಾವಿದರು ನೃತ್ಯ ಪ್ರದರ್ಶಿಸಲಿದ್ದಾರೆ. ಉತ್ತರಾಖಂಡದ ಕಲಾವಿದರು ರಾಮಲೀಲಾ ಪ್ರದರ್ಶಿಸಲಿದ್ದಾರೆ.

ಸನಾತನ ಧರ್ಮ: ಅಡೆತಡೆಗಳ ನಿರ್ಮೂಲನೆಗೆ ಯೋಗಿ ಪಣ

ಲಖನೌ: ದೇಶದಲ್ಲಿ ಜಾತ್ಯತೀತತೆ ಹೆಸರಿನಲ್ಲಿ ಭಯೋತ್ಪಾದನೆ ನಕ್ಸಲ್ವಾದಕ್ಕೆ ಪ್ರೋತ್ಸಾಹ ದೊರೆಯುತ್ತಿದೆ ಎಂದು ಆರೋಪಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸನಾತನ ಧರ್ಮಕ್ಕೆ ಇರುವ ಎಲ್ಲ ಅಡೆತಡೆಗಳನ್ನು ತೊಡೆದುಹಾಕುವುದಾಗಿ ಪ್ರತಿಜ್ಞೆ ಮಾಡಿದರು. ಅಯೋಧ್ಯೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಸನಾತನ ಧರ್ಮ’ದ ಹಾದಿಗೆ ಅಡೆತಡೆ ತರುವವರಿಗೆ ತಕ್ಕ ಶಾಸ್ತಿ ಆಗಲಿದೆ. ರಾಜ್ಯದಲ್ಲಿ ಮಾಫಿಯಾದವರಿಗೆ ಆಗುತ್ತಿರುವ ಗತಿಯೇ ಅವರಿಗೂ ಆಗಲಿದೆ’ ಎಂದು ಎಚ್ಚರಿಸಿದರು. ‘ಜಾತ್ಯತೀತತೆ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವವರು ದೇಶದ ಆತ್ಮವನ್ನು ಗಾಸಿಗೊಳಿಸುತ್ತಿದ್ದಾರೆ. ಅವರು ಭಯೋತ್ಪಾದನೆ ಮತ್ತು ನಕ್ಸಲ್ವಾದವನ್ನು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ಯೋಗಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.