ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಯಾಣ: ಎಎಪಿ, ಕಾಂಗ್ರೆಸ್ ಮೈತ್ರಿ ಸಾಧ್ಯತೆ

ಮೈತ್ರಿಗೆ ಸ್ವಾಗತ –ಎಎಪಿ ನಾಯಕ ಸಂಜಯ್ ಸಿಂಗ್ * ಅಂತಿಮ ತೀರ್ಮಾನವಾಗಿಲ್ಲ – ಹರಿಯಾಣ ‘ಕೈ’ ಉಸ್ತುವಾರಿ ದೀಪಕ್‌ ಬಬಾರಿಯಾ
Published : 3 ಸೆಪ್ಟೆಂಬರ್ 2024, 20:32 IST
Last Updated : 3 ಸೆಪ್ಟೆಂಬರ್ 2024, 20:32 IST
ಫಾಲೋ ಮಾಡಿ
Comments

ನವದೆಹಲಿ: ‘ಹರಿಯಾಣ ವಿಧಾನಸಭೆ ಚುನಾವಣೆಗೆ ಆಮ್‌ ಆದ್ಮಿ ಪಕ್ಷದ (ಎಎಪಿ) ಜೊತೆಗೆ ಮೈತ್ರಿ ಹೊಂದುವ ಕುರಿತು ಮಾತುಕತೆ ನಡೆದಿದೆ. ಆದರೆ, ಇನ್ನೂ ಅಂತಿಮಗೊಂಡಿಲ್ಲ’ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.

ಮೈತ್ರಿ ಹೊಂದುವ ಕುರಿತು ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ, ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಒಲವು ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳನ್ನು ಇದಕ್ಕೂ ಮುನ್ನ ಎಎಪಿ ನಾಯಕ, ರಾಜ್ಯಸಭೆ ಸದಸ್ಯ ಸಂಜಯ್‌ ಸಿಂಗ್ ಸ್ವಾಗತಿಸಿದ್ದರು.

ಮೈತ್ರಿ ಕುರಿತ ಪ್ರಶ್ನೆಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಹರಿಯಾಣ ಉಸ್ತುವಾರಿ ದೀಪಕ್‌ ಬಬಾರಿಯ, ಎಎಪಿ ಜೊತೆ ಚರ್ಚೆ ನಡೆದಿದೆ’ ಎಂದು ದೃಢಡಿಸಿದರು. ಮತ್ತೊಂದು ಪ್ರಶ್ನೆಗೆ, ‘ನಾವು ಬಿಜೆಪಿ ಸೋಲಿಸಬೇಕಿದೆ. ಮತಗಳ ವಿಭಜನೆ ಆಗದಂತೆ ತಡೆಯಬೇಕಿದೆ’ ಎಂದು ಹೇಳಿದರು.

34 ಹೆಸರು ಅಂತಿಮ: ರಾಜ್ಯದ 34 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ಅಂತಿಮಗೊಳಿಸಿದೆ. 22 ಮಂದಿ ಹಾಲಿ ಶಾಸಕರಿಗೂ ಟಿಕೆಟ್ ಘೋಷಿಸಿದೆ. ಇನ್ನೂ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಬೇಕಾಗಿದೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ಅ. 8ರಂದು ನಡೆಯಲಿದೆ. ಈ ಮೊದಲು ಅ. 1ರಂದು ಚುನಾವಣೆ ನಡೆಯಲಿದೆ ಎಂದು ಪ್ರಕಟಿಸಲಾಗಿತ್ತು.

ಆದರೆ, ಬಿಷ್ಣೋಯಿ ಸಮಾಜದ ಹಬ್ಬದ ಕಾರಣ ಮತದಾನವನ್ನು ಅ.5ಕ್ಕೆ ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗವು ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT