ಬುಡಾಪೆಸ್ಟ್: ಯಶಸ್ಸಿನ ಓಟ ಮುಂದುವರಿಸಿರುವ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ ಸತತ ನಾಲ್ಕನೇ ಜಯ ಪಡೆದರು. 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಅವರ ಉತ್ತಮ ಆಟದ ಬಲದಿಂದ ಭಾರತ 3.5–0.5 ಅಂತರದಿಂದ ಶನಿವಾರ ರಾತ್ರಿ ಸರ್ಬಿಯಾ ತಂಡವನ್ನು ಮಣಿಸಿತು.

ಪ್ರಜ್ಞಾನಂದ ಅವರು ಅಲೆಕ್ಸಿ ಸರನ ಅವರೊಂದಿಗೆ ಪಾಯಿಂಟ್ ಹಂಚಿಕೊಂಡ ಮೇಲೆ ಅರ್ಜುನ್ ಅವರ ಆಟ ಭಾರತದ ಪಾಲಿಗೆ ನಿರ್ಣಾಯಕವಾಗಿತ್ತು. ವಿಶ್ವದ ನಾಲ್ಕನೇ ಕ್ರಮಾಂಕದ ಅರ್ಜುನ್ ನಿರಾಸೆ ಮೂಡಿಸದೇ, ಪರಿಪೂರ್ಣ ಪ್ರತಿದಾಳಿಯ ಆಟದಲ್ಲಿ ಎದುರಾಳಿ ಇಂಡ್ಯಿಕ್ ಅಲೆಕ್ಸಾಂಡರ್ ಅವರನ್ನು ಸೋಲಿಸಿದರು. ಮಾತ್ರವಲ್ಲ, ತಮ್ಮ ರೇಟಿಂಗನ್ನು 2800 ರೇಟಿಂಗ್ ಹತ್ತಿರ ತಲುಪಿದರು.

ಗ್ರ್ಯಾಂಡ್‌ಮಾಸ್ಟರ್‌ಗಳಾದ ವಿದಿತ್ ಗುಜರಾತಿ ಮತ್ತು ಡಿ.ಗುಕೇಶ್ ಅವರು ಕ್ರಮವಾಗಿ ಎವಿಕ್ ವೆಲಿಮಿರ್ ಮತ್ತು ಅಲೆಕ್ಸಾಂಡರ್ ಪ್ರೆಡ್ಕೆ ಅರನ್ನು ಸೋಲಿಸಿದರು.

ಮಹಿಳೆಯರ ವಿಭಾಗದಲ್ಲಿ ಭಾರತ ತಂಡ 3.5–0.5 ರಿಂದ ಫ್ರಾನ್ಸ್ ತಂಡವನ್ನು ಮಣಿಸಿ ಅಜೇಯ ಓಟ ಮುಂದುವರಿಸಿತು.

ಇನ್ನು ಏಳೂ ಸುತ್ತಿನ ಪಂದ್ಯಗಳು ಬಾಕಿವುಳಿದಿವೆ.

ಅಗ್ರ ಬೋರ್ಡ್‌ನಲ್ಲಿ ಡಿ.ಹಾರಿಕ ತಮ್ಮೆಲ್ಲ ಅನುಭವ ಬಳಸಿಕೊಂಡು ಫ್ರೆಂಚ್ ಆಟಗಾರ್ತಿ ಡೀಮೆಂಟೆ ದೊಲಿಟ್ ಕಾರ್ನೆಟ್ ಅವರನ್ನು ಸೋಲಿಸಿದರು. ತಾನಿಯಾ ಸಚದೇವ್ ಅವರು ಬೆನ್‌ಬೆಸ್ಮಿಯಾ ನತಾಶ ಅವರ ವಿರುದ್ಧ ಗೆಲುವಿಗೆ ಹೋರಾಡಬೇಕಾಯಿತು. ಫ್ರಾನ್ಸ್‌ನ ಆಟಗಾರ್ತಿ ಸಮಯದ ಒತ್ತಡಕ್ಕೆ ಸಿಲುಕಿದ್ದರಿಂದ ತಾನಿಯಾ ಗೆಲುವು ಸುಲಭವಾಯಿತು. ದಿವ್ಯಾ ದೇಶಮುಖ್, ಹೆಝಾಜಿಪೊರ್ ಮಿತ್ರಾ ವಿರುದ್ಧ ಜಯಗಳಿಸಿದರೆ, ವೈಶಾಲಿ ಮತ್ತು ಸೋಫಿ ಮಿಲಿಟ್ ಪಾಯಿಂಟ್ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.