ಚೆನ್ನೈ: ಕೋವಿಡ್–19 ಸಾಂಕ್ರಾಮಿಕದ ಕಾರಣ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಸರಳವಾಗಿ ನಡೆಸಲಾಗುವುದು ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿದ ಬೆನ್ನಲ್ಲೇ ಅವರು, ತಂದೆ ಹಾಗೂ ಪಕ್ಷದ ಮಾಜಿ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಸಮಾಧಿಗೆ ತೆರಳಿ ಪುಷ್ಪನಮನ ಸಲ್ಲಿಸಿದ್ದಾರೆ. ಬಳಿಕ ವರದಿಗಾರರ ಜತೆ ಮಾತನಾಡಿ, ಅಧಿಕಾರ ಸ್ವೀಕಾರದ ದಿನಾಂಕವನ್ನು ಶೀಘ್ರ ನಿಗದಿಪಡಿಸಲಾಗುವುದು ಎಂದು ಹೇಳಿದ್ದಾರೆ.

ಓದಿ:ವಿಧಾನಸಭಾ ಚುನಾವಣೆ ಫಲಿತಾಂಶ: ಸ್ಟಾಲಿನ್, ವಿಜಯನ್, ದೀದಿಗೆ ಗದ್ದುಗೆ

ರಾಜಭವನದಲ್ಲಿ ಅಧಿಕಾರ ಸ್ವೀಕಾರ ಸಮಾರಂಭ ಸರಳವಾಗಿ ನಡೆಯಲಿದೆ. ಇಂದು (ಸೋಮವಾರ) ರಾತ್ರಿ ಅಥವಾ ಮಂಗಳವಾರ ಬೆಳಿಗ್ಗೆ ದಿನಾಂಕ ತಿಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ನಮ್ಮ ಪರ ಮತ ಚಲಾಯಿಸಿದವರ ಸಂತಸಕ್ಕಾಗಿ ಪಕ್ಷವು ಕೆಲಸ ಮಾಡಲಿದೆ. ನಮಗೆ ಮತ ಚಲಾಯಿಸದವರ ಪರವಾಗಿಯೂ ಕೆಲಸ ಮಾಡಲಿದ್ದೇವೆ. ಆ ಮೂಲಕ, ‘ನಾವೂ ಯಾಕೆ ಈ ಡಿಎಂಕೆ ಮೈತ್ರಿಕೂಟದ ಪರ ಮತ ಚಲಾಯಿಸಲಿಲ್ಲ’ ಎಂದು ಅವರು ಯೋಚಿಸುವಂತೆ ಮಾಡಲಿದ್ದೇವೆ ಎಂದು ಸ್ಟಾಲಿನ್ ಹೇಳಿದ್ದಾರೆ.

ಓದಿ:ಬಂಗಾಳದಲ್ಲಿ ಬಿಜೆಪಿಯೀಗ ಪ್ರಮುಖ ಪ್ರತಿಪಕ್ಷ, ಸಿದ್ಧಾಂತ ಪ್ರಚಾರ ಸಾಗಲಿದೆ: ನಡ್ಡಾ

ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ತಕ್ಷಣದಿಂದಲೇ ಹಂತ ಹಂತವಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.