ಬೆಂಗಳೂರು: 'ಕೆಲವರು ಒವೈಸಿಯನ್ನು ಬಿಜೆಪಿ ಪ್ರೀತಿಸುತ್ತದೆ ಎನ್ನುತ್ತಾರೆ. ಒವೈಸಿಗೆ ಭಾರತ ರತ್ನ ಸಿಗುತ್ತದೆ ಎನ್ನುತ್ತಾರೆ. ಇವರು ಏಕೆ ಹೀಗೆ ಹೇಳುತ್ತಿದ್ದಾರೆ ಎಂದು ನನಗೆ ತಿಳಿಯುತ್ತಿಲ್ಲ. ಈ ಜಿಹಾದಿಯನ್ನು ಬಿಜೆಪಿ ಏಕೆ ಪ್ರೀತಿಸಬೇಕೆಂದು ತಿಳಿಯುತ್ತಿಲ್ಲ' ಎಂದು ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲಿಮಾ ನಸ್ರೀನ್ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಗಳಿಸಲು ಕೊಡುಗೆ ನೀಡಿದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರಿಗೆ ಪದ್ಮ ವಿಭೂಷಣ ಮತ್ತು ಭಾರತ ರತ್ನ ಕೊಡಬೇಕು ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್ ಅವರು ಕಳೆದ ವಾರ ಟೀಕಿಸಿದ್ದರು.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಷ್ಟೇ ಗೆಲ್ಲಲು ಸಫಲವಾಗಿರುವ ಬಿಎಸ್ಪಿ ಹಾಗೂ ಖಾತೆ ತೆರೆಯಲು ವಿಫಲಗೊಂಡ ಎಐಎಂಐಎಂ ಪಕ್ಷಗಳು ಸಮಾಜವಾದಿ ಪಕ್ಷಕ್ಕೆ(ಎಸ್ಪಿ) ತೀವ್ರ ಪೆಟ್ಟು ನೀಡುವಲ್ಲಿ ಸಫಲವಾದವು. ಇದರಿಂದ ಬಿಜೆಪಿಗೆ ಲಾಭವಾಯಿತು ಎಂದು ವಿಶ್ಲೇಷಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ನೆರವಾಯಿತೇ ಎಐಎಂಐಎಂ, ಅಂಕಿಅಂಶಗಳಿಂದ ತಿಳಿಯೋದೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.