ಶ್ರೀನಗರ: ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಗುರುವಾರ ರಾತ್ರಿಯಿಡೀ ಎನ್ಕೌಂಟರ್ ನಡೆಸಿದ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿವೆ.

ಇನ್ನೊಂದೆಡೆ, ಶೋಪಿಯಾನ್ ಪಟ್ಟಣದಲ್ಲಿ ಗುರುವಾರ ಸಂಜೆ ಆರಂಭವಾದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಭದ್ರತಾಪಡೆಗಳು ಹತ್ಯೆ ಮಾಡಿವೆ. ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಈಗ ಎನ್ಕೌಂಟರ್ ಸ್ಥಗಿತಗೊಳಿಸಲಾಗಿದೆ. ಈ ಘಟನೆಯ ನಂತರ ಮಸೀದಿಯೊಳಗೆ ಭಯೋತ್ಪಾದಕನೊಬ್ಬ ಅಡಗಿ ಕುಳಿತಿರುವ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಅವನನ್ನು ಹೊರತರುವ ಪ್ರಯತ್ನ ಮಾಡುತ್ತಿದ್ಧಾರೆ.

‘ಮಸೀದಿಯೊಳಗೆ ಅಡಗಿಕೊಂಡಿರುವ ಭಯೋತ್ಪಾದಕ ಹೊರಗೆ ಬಂದು ಶರಣಾಗುವಂತೆ ಮನವೊಲಿಸಲು ಭಯೋತ್ಪಾದಕನ ಸಹೋದರ ಮತ್ತು ಸ್ಥಳೀಯ ನಿವಾಸಿ ಇಮಾಮ್ಸಾಹೇಬ್ ಎಂಬುವವರನ್ನು ಮಸೀದಿ ಒಳಗೆ ಕಳುಹಿಸಲಾಗಿದೆ. ಮಸೀದಿಯನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ‘ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.