ಪಣಜಿ: ಗೋವಾದ ವಿಧಾನಸಭೆ ಪ್ರವೇಶಕ್ಕೆ ಮೂರು ದಂಪತಿ ಸಿದ್ಧರಾಗಿದ್ದಾರೆ. 40 ಸದಸ್ಯರ ಗೋವಾ ಹೊಸ ವಿಧಾನಸಭೆಯಲ್ಲಿ ಮೂರು ಜೋಡಿ ಗಂಡ ಮತ್ತು ಹೆಂಡತಿ ಇರಲಿದ್ದಾರೆ.

ಹೌದು, ಗುರುವಾರ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮತ್ತು ಅವರ ಪತ್ನಿ ದಿವ್ಯಾ ಕ್ರಮವಾಗಿ ವಲ್ಪೊಯ್ ಮತ್ತು ಪೊರಿಯಮ್ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಗೆಲುವು ದಾಖಲಿಸಿದ್ಧಾರೆ. ವಿಶ್ವಜಿತ್ ರಾಣೆ 8,085 ಮತಗಳ ಅಂತರದಿಂದ ಗೆಲುವು ಕಂಡರೆ ಅವರ ಪತ್ನಿ ದಿವ್ಯಾ 13,943 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

ಕಾಂಗ್ರೆಸ್ನ ಮೈಕೆಲ್ ಲೋಬೊ ಅವರು ತಮ್ಮ ಸಾಂಪ್ರದಾಯಿಕ ವಿಧಾನಸಭಾ ಕ್ಷೇತ್ರವಾದ ಕಲಾಂಗುಟ್ನಿಂದ ಗೆದ್ದರೆ, ಪತ್ನಿ ದೆಲಿಲಾ ಅವರು ಸಿಯೋಲಿಮ್ನಿಂದ ಕಾಂಗ್ರೆಸ್ ಟಿಕೆಟ್ನಲ್ಲಿ ಗೆದ್ದಿದ್ದಾರೆ.

ಬಿಜೆಪಿಯ ಅಟಾನಾಸಿಯೊ ಮೊನ್ಸೆರಾಟ್ಟೆ ಪಣಜಿಯಿಂದ ಗೆದ್ದರೆ, ಅವರ ಪತ್ನಿ ಜೆನಿಫರ್ ಬಿಜೆಪಿ ಟಿಕೆಟ್ನಲ್ಲಿ ತಾಲೀಗಾವೊದಿಂದ ಗೆದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.