ಮನೇಂದ್ರಗಢ(ಛತ್ತೀಸ್ಗಢ): ಶಿಕ್ಷಕರೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ಛತ್ತೀಸ್ಗಢದ ಮುನೇಂದ್ರಗಢ–ಚಿರಮಿರಿ–ಭಾರತ್ಪುರ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ಸಂಬಂಧ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಸೇರಿ 4 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜನಕಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 17 ವರ್ಷದ ಬಾಲಕಿ ಮೇಲೆ ನವೆಂಬರ್ 17 ಮತ್ತು 22ರಂದು ಎರಡು ಬಾರಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಸಂತ್ರಸ್ತೆ ದೂರು ಆಧರಿಸಿ ನಾಲ್ವರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ದೇವಗಢದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಅಶೋಕ್ ಕುಮಾರ್ ಕುಶ್ವಾಹ ಮತ್ತು ಕುಶಾಲ್ ಸಿಂಗ್ ಪರಿಹಾರ್ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವೇಂದ್ರ ಸಿಂಗ್ ಕುಶ್ವಾಹ ಮತ್ತು ಅರಣ್ಯ ಇಲಾಖೆ ನೌಕರ ಬನ್ವಾರಿ ಸಿಂಗ್ ಎಂದು ಗುರುತಿಸಲಾಗಿದೆ.

11ನೇ ತರಗತಿಯ ವಿದ್ಯಾರ್ಥಿನಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿ ನವೆಂಬರ್ 17ರಂದು ತನ್ನ ಕಾರಿನಲ್ಲಿ ಕುಶಾಲ್ ಮನೆಗೆ ರವೇಂದ್ರ ಕರೆದೊಯ್ದಿದ್ದರು. ಮನೆಯಲ್ಲಿ ಅದಾಗಲೇ ಶಿಕ್ಷಕ ಅಶೋಕ್ ಇದ್ದನು. ಈ ಸಂದರ್ಭ ಮೂವರು ಅತ್ಯಾಚಾರ ಎಸಗಿದ್ದು, ಮೊಬೈಲ್ನಲ್ಲಿ ವಿಡಿಯೊ ಚಿತ್ರೀಕರಿಸಿದ್ದಾರೆ. ಬಳಿಕ, ಬಾಲಕಿಯನ್ನು ಬ್ಲಾಕ್ಮೇಲ್ 22ರಂದು ಮತ್ತೊಮ್ಮೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಕಾಮುಕ ಶಿಕ್ಷಕರ ಕಾಟದಿಂದ ರೋಸಿಹೋದ ಬಾಲಕಿ ಪೊಲೀಸರಿಗೆ ದೂರು ನೀಡಿದ್ದು, ಅವರ ದುಷ್ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.