ತಿರುಪತಿ: ಹೊಸ ವರ್ಷದ ದಿನದಂದು ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಸ್ಥಾನ ಹೊಸ ದಾಖಲೆ ಬರೆದಿದೆ. ಆ ದಿನ ದೇವಾಲಯಕ್ಕೆ ದಾಖಲೆಯ ₹ 7.6 ಕೋಟಿ ದೇಣಿಗೆ ಹರಿದು ಬಂದಿದೆ.

ಜನವರಿ 1ರಂದು ತಿರುಪತಿ ದೇವಾಲಯ ಹೆಚ್ಚು ಕಾಣಿಕೆ ಪಡೆಯುವ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಮೊತ್ತದ ಹುಂಡಿ ಕಾಣಿಕೆ ಸಲ್ಲಿಕೆಯಾಗಿರುವುದು ದಾಖಲೆಯಾಗಿದೆ.

ವಿಶ್ವದ ಶ್ರೀಮಂತ ದೇವಾಲಯ ಎಂದು ಖ್ಯಾತಿ ಪಡೆದಿರುವ ತಿರುಪತಿ ದೇವಾಸ್ಥಾನ ವೈಕುಂಠ ಏಕಾದಶಿಯ ದಿನ ₹ 6.3 ಕೋಟಿ ಕಾಣಿಕೆ ಹರಿದು ಬಂದಿದೆ.

2022ರ ಡಿಸೆಂಬರ್ 31ರ ಮಧ್ಯರಾತ್ರಿಯಿಂದ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಈ ವೇಳೆ ಕಿಲೋ ಮೀಟರ್‌ಗಳವರೆಗೆ ಜನರ ಸಾಲುಗಳಿತ್ತು.

ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಮಾಹಿತಿ ಪ್ರಕಾರ ಪ್ರತಿ ದಿನ ದೇವಾಲಯಕ್ಕೆ ಸರಾಸರಿ 6 ಕೋಟಿ ದೇಣಿಗೆ ಬರುತ್ತಿದೆ. 2012ರಿಂದ ದೇವಾಲಯಕ್ಕೆ ದೇಣಿಗೆ ಬರುವ ಪ್ರಮಾಣ ದ್ವಿಗುಣಗೊಂಡಿದೆ ಎಂದು ಟಿಟಿಡಿ ಹೇಳಿದೆ. ಕೋವಿಡ್ ನಂತರದ ದಿನಗಳಲ್ಲೂ ದೇಣಿಗೆ ಪ್ರಮಾಣ ಕಡಿಮೆಯಾಗಿಲ್ಲ ಎಂದು ದೇವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.