ಚೆನ್ನೈ: ಜನರ ಜೀವಕ್ಕೆ ಕಂಟಕ ತರುವ ಅಕ್ರಮ ಮದ್ಯ ತಯಾರಿಕೆ, ಸಂಗ್ರಹ ಮತ್ತು ಮಾರಾಟಕ್ಕೆ ವಿಧಿಸಲಾಗುವ ಶಿಕ್ಷೆ ಮತ್ತು ದಂಡದ ಪ್ರಮಾಣ ಹೆಚ್ಚಿಸಲು ತಮಿಳುನಾಡು ನಿಷೇಧ ಕಾಯ್ದೆ–1937ಕ್ಕೆ ಸರ್ಕಾರವು ಶನಿವಾರ ತಿದ್ದುಪಡಿ ಮಾಡಿತು.

ಸರ್ಕಾರವು ಅಧಿಸೂಚನೆ ಹೊರಡಿಸಿದ ದಿನದಿಂದ ತಮಿಳುನಾಡು ನಿಷೇಧ (ತಿದ್ದುಪಡಿ) ಕಾಯ್ದೆ–2024 ಜಾರಿಗೆ ಬರಲಿದ್ದು, ರಾಜ್ಯದಿಂದ ಅಕ್ರಮ ಮದ್ಯ ದಂಧೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವ ಗುರಿ ಹೊಂದಿದೆ.

ಕಲ್ಲಕುರಿಚ್ಚಿ ಘಟನೆಯ ಹಿನ್ನೆಲೆಯಲ್ಲಿ ಸರ್ಕಾರವು ಕಾನೂನಿಗೆ ತಿದ್ದುಪಡಿ ತಂದಿದ್ದು, ಕಾಯ್ದೆಯ ಸೆಕ್ಷನ್ 4, 5, 6, 7 ಮತ್ತು 11ರ ಅಡಿ ಶಿಕ್ಷೆ ಮತ್ತು ದಂಡದ ಪ್ರಮಾಣ ಹೆಚ್ಚಿಸಬಹುದಾಗಿದೆ. ಕಾಯ್ದೆಯ ಅನ್ವಯ ಗರಿಷ್ಠ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹5 ಲಕ್ಷವರೆಗಿನ ದಂಡವನ್ನು ಪ್ರಸ್ತಾಪಿಸಲಾಗಿದೆ.

ಸಚಿವ ಎಸ್. ಮುತ್ತುಸ್ವಾಮಿ ಮಂಡಿಸಿದ ಮಸೂದೆಯನ್ನು ನಂತರ ಸದನ ಅಂಗೀಕರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.