ಚೆನ್ನೈ: ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ ಅವರು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಸೆಷನ್ಸ್ ನ್ಯಾಯಾಲಯಕ್ಕೆ ಸೋಮವಾರ ಹಾಜರಾದರು.

ಪ್ರಧಾನ ಸೆಷನ್ಸ್ ನ್ಯಾಯಾಧೀಶ ಎಸ್. ಕಾರ್ತಿಕೇಯನ್ ಅವರು ಪ್ರಕರಣವನ್ನು ಅಕ್ಟೋಬರ್ 4ಕ್ಕೆ ಮುಂದೂಡಿದರು. ಸುಪ್ರಿಂ ಕೋರ್ಟ್ ಜಾಮೀನು ಮಂಜೂರು ಮಾಡಿದ ನಂತರ ಕಳೆದ ವಾರ ಪುಳಲ್ ಜೈಲಿನಿಂದ ಸೆಂಥಿಲ್ ಅವರು ಬಿಡುಗಡೆಯಾಗಿದ್ದರು.

ಪ್ರಕರಣವು ವಿಚಾರಣೆಗೆ ಬಂದಾಗ, ಇ.ಡಿಯು, ಹಣ ಅಕ್ರಮ ವರ್ಗಾವಣೆಯಾದ ಅವಧಿಯಲ್ಲಿ ಕೆಲಸ ಮಾಡಿದ ಬ್ಯಾಂಕ್ ಅಧಿಕಾರಿಗಳ ವಿವರಗಳನ್ನು ಕೋರಿ ಸಚಿವರು ಸಲ್ಲಿಸಿದ್ದ ಅರ್ಜಿಗೆ ಪ್ರತಿ ಅಫಿಡವಿಟ್ ಸಲ್ಲಿಸಿತು.

ಇ.ಡಿ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್.ರಮೇಶ್, ಸೆಂಥಿಲ್ ಬಾಲಾಜಿ ಸಲ್ಲಿಸಿರುವ ಅರ್ಜಿ ಸೂಕ್ತವಲ್ಲ. ಅರ್ಜಿದಾರರು ವಿಚಾರಣೆಯನ್ನು ಇನ್ನಷ್ಟು ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.

ಬಾಲಾಜಿ ಪರ ವಾದಿಸಿದ ವಕೀಲ ಗೌತಮನ್, ಅರ್ಜಿಯನ್ನು ಮಾನ್ಯ ಮಾಡಬಹುದಾಗಿದೆ. ಬ್ಯಾಂಕ್ ಅಧಿಕಾರಿಗಳ ವಿವರಗಳು ಪ್ರಕರಣಕ್ಕೆ ಸಂಬಂಧಿಸಿವೆ. ಆದ್ದರಿಂದ ನ್ಯಾಯಾಲಯವು ಬ್ಯಾಂಕ್ ಅಧಿಕಾರಿಗಳ ವಿವರಗಳನ್ನು ನೀಡುವಂತೆ ಇ.ಡಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.

ಸೆಪ್ಟೆಂಬರ್ 19 ರಂದು ಪ್ರಾಸಿಕ್ಯೂಷನ್ನಿಂದ ವಿಚಾರಣೆಗೆ ಒಳಗಾದ ವಿಧಿ ವಿಜ್ಞಾನ ಗಣಕಯಂತ್ರ ವಿಭಾಗದ ಸಹಾಯಕ ನಿರ್ದೇಶಕ ಮಣಿವಣನ್ ಅವರು ಆರೋಗ್ಯ ಸಮಸ್ಯೆಗಳಿಂದ ಸೆ. 26 ರಂದು ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಸೋಮವಾರವೂ ಪಾಟೀ ಸವಾಲಿಗೆ ಹಾಜರಾಗಲಿಲ್ಲ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್.ರಮೇಶ್ ಹೇಳಿದರು.

ಮಣಿವಣನ್ಗೆ ಸಾಕ್ಷಿ ವಾರೆಂಟ್ ಜಾರಿ ಮಾಡುವಂತೆ ಆದೇಶಿಸಿದ ನ್ಯಾಯಾಧೀಶರು, ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದರು.

ಉದ್ಯೋಗಕ್ಕಾಗಿ ಹಣ’ ಹಗರಣದಲ್ಲಿ ಸೆಂಥಿಲ್ ಬಾಲಾಜಿ ಅವರನ್ನು 2023ರ ಜೂನ್ 14ರಂದು ಇ.ಡಿ ಬಂಧಿಸಿತ್ತು. ಬಾಲಾಜಿ ವಿರುದ್ಧ 2023ರ ಆಗಸ್ಟ್ 12 ರಂದು 3,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.