ಹೈದರಾಬಾದ್/ಚೆನ್ನೈ: ಆಂಧ್ರ ಪ್ರದೇಶದ ದಕ್ಷಿಣ ಕರಾವಳಿ ಹಾಗೂ ರಾಯಲಸೀಮಾ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಪ್ರಕಾಶಂ, ನೆಲ್ಲೂರು, ಕಡಪಾ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಗುಂಟೂರು, ಕೃಷ್ಣ ಹಾಗೂ ತೆಲಂಗಾಣದಲ್ಲಿ ಸಾಧಾರಣ ಮಳೆಯಾಗಿದೆ.

ನೆಲ್ಲೂರಿನ ಕಾವಾಲಿಯಲ್ಲಿ 15 ಸೆ.ಮೀ ಮಳೆ ಸುರಿದಿದೆ. ತಿರುಪತಿ ಜಿಲ್ಲೆಯಲ್ಲಿಯೂ ತೀವ್ರ ಮಳೆಯಾಗುತ್ತಿದೆ. ಇಲ್ಲಿನ ವಿಮಾನ ನಿಲ್ದಾಣದ ರನ್ವೇನಲ್ಲಿ ನೀರು ನಿಂತಿದೆ. ಮಳೆಯ ಕಾರಣ ವಿಮಾನದ ಲ್ಯಾಂಡಿಂಗ್ನಲ್ಲಿ ಸಮಸ್ಯೆ ಉಂಟಾಗಿ ತಿರುಪತಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನವನ್ನು ಚೆನ್ನೈಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಹೈದರಾಬಾದ್ನಿಂದ ತಿರುಪತಿಗೆ ವಿಮಾನ ಹಾರಾಟವನ್ನು ರದ್ದು ಮಾಡಲಾಗಿದೆ.

ಚೆನ್ನೈ ಸೇರಿ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಸೋಮವಾರದಿಂದ ಸುರಿಯುತ್ತಿದ್ದ ಮಳೆಯು ಬುಧವಾರ ಬಿಡುವು ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಒತ್ತಡವು ತಗ್ಗಿರುವುದರಿಂದ ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ.

‘ಮುಂದಿನ ಎರಡು ದಿನಗಳಲ್ಲಿ ಭಾರಿ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆಯು ಮಂಗಳವಾರ ಮುನ್ಸೂಚನೆ ನೀಡಿತ್ತು. ‘ಸರ್ಕಾರವು ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳ ಕಾರಣ ರಾಜ್ಯದಲ್ಲಿ ಮಳೆಹಾನಿ ಪ್ರಕರಣಗಳು ಕಡಿಮೆಯಾಗಿವೆ’ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದರು.

ಭಾರಿ ಮಳೆಯ ಕಾರಣ ರಾಜ್ಯದ ಹಲವು ಜಲಾಶಯಗಳು ವೇಗವಾಗಿ ಭರ್ತಿಯಾಗಿವೆ. ರಾಜ್ಯದ ಆರು ಜಲಾಶಯಗಳಲ್ಲಿನ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 41.61ರಷ್ಟು ಭಾಗವು ಮಳೆ ಆರಂಭವಾದ ಕೆಲವೇ ದಿನಗಳಲ್ಲಿ ತುಂಬಿಕೊಂಡಿದೆ. ಮಂಗಳವಾರದ ಹೊತ್ತಿಗೆ 4.84 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಈ ಪ್ರಮಾಣವು ಬುಧವಾರದ ಹೊತ್ತಿಗೆ 5.5 ಟಿಎಂಸಿ ಅಡಿಯಷ್ಟಾಗಿದೆ.

ತಿರುಪತಿ ದೇವಸ್ಥಾನ ಮಾರ್ಗದಲ್ಲಿ ಭೂಕುಸಿತ ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವ ಘಾಟಿಯಲ್ಲಿ ಭೂಕುಸಿತ ಉಂಟಾಗಿದೆ. ರಸ್ತೆಗಳ ಮೇಲೆ ಕಲ್ಲು ಬಂಡೆಗಳು ಬಿದ್ದಿವೆ. ಆದ್ದರಿಂದ ಶ್ರೀವಾರಿ ಪಾದಲು ಆಕಾಸ ಗಂಗಾ ಜಾಪಲಿ ಹಾಗೂ ಪಾಪವಿನಾಸಿನಿ ಸ್ಥಳಗಳಿಗೆ ಭೇಟಿ ನೀಡಲು ಟಿಟಿಡಿ ಭಕ್ತರಿಗೆ ಅನುಮತಿ ನೀಡುತ್ತಿಲ್ಲ. ದೇವಸ್ಥಾನದ ವಿಐಪಿ ದರ್ಶನವನ್ನೂ ಟಿಟಿಡಿ ರದ್ದು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.