ಹೈದರಾಬಾದ್:ಲೈಂಗಿಕ ಕಿರುಕುಳ ಆರೋಪದಲ್ಲಿಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಬ್ಯೂರೊ ಮುಖ್ಯಸ್ಥ, ರಾಜಕೀಯ ಸಂಪಾದಕ ಪ್ರಶಾಂತ್ ಝಾ ಸ್ಥಾನ ತೊರೆದ ಬೆನ್ನಲ್ಲೇ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲೂ ಅಂತಹದ್ದೇ ಪ್ರಕರಣ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾದ ಹೈದರಾಬಾದ್ನಸ್ಥಾನಿಕ ಸಂಪಾದಕಕೆ.ಆರ್. ಶ್ರೀನಿವಾಸ್ ವಿರುದ್ಧ ಏಳುಮಹಿಳೆಯರು ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ‘ಶ್ರೀನಿವಾಸ್ ವಿರುದ್ಧದ ಆರೋಪಗಳ ಮೇಲಿನ ತನಿಖೆ ಪೂರ್ಣಗೊಳ್ಳುವವರೆಗೂ ಆಡಳಿತಾತ್ಮಕ ರಜೆ ಮೇಲೆ ತೆರಳುವಂತೆ ಅವರಿಗೆ ಸೂಚಿಸಲಾಗಿದೆ’ ಎಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಸ್ಥಾನ ತೊರೆದ ಹಿಂದೂಸ್ತಾನ್ ಟೈಮ್ಸ್ ಬ್ಯೂರೊ ಮುಖ್ಯಸ್ಥ

ಅಶ್ಲೀಲ ಸಂದೇಶಗಳು, ಸಂಜ್ಞೆಗಳನ್ನು ಕಳುಹಿಸುವುದಲ್ಲದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಸಂಪಾದಕರ ವಿರುದ್ಧ ನೀಡಿದ ದೂರಿನಲ್ಲಿ ಮಹಿಳೆಯರು ಆರೋಪಿಸಿದ್ದರು.

‘ಎಲ್ಲ ಉದ್ಯೋಗಿಗಳಿಗೂ ಸುರಕ್ಷಿತ, ಕೆಲಸಕ್ಕೆ ಅನುಕೂಲಕರವಾದಮತ್ತು ಲೈಂಗಿಕ ಕಿರುಕುಳ ಮುಕ್ತ ವಾತಾವರಣ ನೀಡಲು ಟೈಮ್ಸ್ ಆಫ್ ಇಂಡಿಯಾ ಬದ್ಧವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆ.ಆರ್. ಶ್ರೀನಿವಾಸ್ ವಿಚಾರವನ್ನು ಬಿಸಿಸಿಎಲ್ನ ಆಂತರಿಕ ದೂರುಗಳ ಸಮಿತಿ ತನಿಖೆ ನಡೆಸಲಿದೆ. ಮುಕ್ತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿಶ್ರೀನಿವಾಸ್ ಅವರಿಗೆ ಆಡಳಿತಾತ್ಮಕ ರಜೆ ನೀಡಲಾಗಿದೆ. ಸಮಿತಿಯು ಅದರ ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ಸ್ವತಂತ್ರವಾಗಿದೆ’ ಎಂದು ಎಲ್ಲ ಉದ್ಯೋಗಿಗಳಿಗೆ ಇ–ಮೇಲ್ ಸಂದೇಶ ಕಳುಹಿಸಲಾಗಿದೆ ಎಂದೂಪ್ರಕಟಣೆಯಲ್ಲಿ ಹೇಳಲಾಗಿದೆ.

ಶ್ರೀನಿವಾಸ್ ಅವರನ್ನು ವಜಾಗೊಳಿಸಬೇಕು ಎಂದು ಏಳು ಮಹಿಳೆಯರು ಸೋಮವಾರ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.