ಕೋಲ್ಕತ್ತ : ಪಶ್ಚಿಮಬಂಗಾಳದಲ್ಲಿ ‘ಜನತಾ ಕಾರ್ಡ್’ ಹಾಗೂ ‘ಮಮತಾ ಕಾರ್ಡ್’ ಮುಖ್ಯವಾಗುತ್ತದೆಯೇ ಹೊರತು ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ‘ರಾಮ್ ಕಾರ್ಡ್’ ಅಲ್ಲ ಎಂದು ತೃಣಮೂಲ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಸಂಪುಟದಲ್ಲಿ ಹಿರಿಯ ಸಚಿವರೂ ಆಗಿರುವ ಚಟರ್ಜಿ ಅವರು ’ಟಿಎಂಸಿ ಸರ್ಕಾರವು ಜನಪರವಾದ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿರುವುದರಿಂದ ಬಿಜೆಪಿಯು ಪಶ್ಚಿಮಬಂಗಾಳದಲ್ಲಿ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿದೆ. ಹಾಗಾಗಿ ಅವರು ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದು ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ‘ ಎಂದು ಹೇಳಿದ್ದಾರೆ.

ಟಿಎಂಸಿ ಮುಖ್ಯಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ’ಈಚೆಗೆ ಮೋದಿ ‘ರಾಮ್ ಕಾರ್ಡ್’ ಬಗ್ಗೆ ಮಾತನಾಡಿದ್ದರು. ಆದರೆ ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿ ವಿಚಾರ ಬಂದಾಗ ‘ಜನತಾ ಕಾರ್ಡ್’ ಹಾಗೂ ‘ಮಮತಾ ಕಾರ್ಡ್’ ಮುಖ್ಯವಾಗುತ್ತದೆ‘ ಎಂದು ಹೇಳಿದ್ದಾರೆ.

ವಾರದ ಹಿಂದೆ ಪಶ್ಚಿಮಬಂಗಾಳದ ಹಲ್ದಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಅವರು ‘ಕಳೆದ 10 ವರ್ಷಗಳಲ್ಲಿ ಟಿಎಂಸಿ ಸರ್ಕಾರ ಅನೇಕ ತಪ್ಪುಗಳನ್ನು ಮಾಡಿದೆ. ಅಧಿಕಾರವನ್ನು ದುರ್ಬಳಕೆ ಮಾಡಿದೆ. ಮುಂದಿನ ಏಪ್ರಿಲ್– ಮೇನಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ’ರಾಮ್ ಕಾರ್ಡ್‘ ತೋರಿಸುವ ಸಮಯ ಬಂದಿದೆ‘ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.