ನವದೆಹಲಿ: ‘ವಿಪಕ್ಷಗಳು ಗೋಮೂತ್ರದಿಂದ ಬಾಯಿ ಶುದ್ಧ ಮಾಡಿಕೊಳ್ಳಬೇಕು‘ ಎಂದು ತ್ರಿಪುರಾದ ಬಿಜೆಪಿ ಸಚಿವ ಹೇಳಿದ ಮಾತು ಈಗ ವಿವಾದಕ್ಕೆ ಆಹಾರವಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ನಡುವೆ ಹೊಂದಾಣಿಕೆ ಆಗಲಿದೆ ಎನ್ನುವ ಚರ್ಚೆಯ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಅವರು ಹೀಗೆ ಹೇಳಿದ್ದಾರೆ.

‘ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವುದಕ್ಕೂ ಮುನ್ನ ಗೋಮೂತ್ರದಿಂದ ಬಾಯಿ ಶುದ್ಧೀಕರಣ ಮಾಡಬೇಕು. ಕಳೆದ ಅವರ ಆಡಳಿತದ ಅವಧಿಯಲ್ಲಿ ತ್ರಿಪುರಾದಲ್ಲಿ ಹಿಂಸೆ ಮತ್ತು ಅರಾಜಕತೆ ಬಿಟ್ಟು ಬೇರೇನೂ ಇರಲಿಲ್ಲ‘ ಎಂದು ತ್ರಿಪುರಾದ ಕಾನೂನು ಸಚಿವ ರತನ್ ಲಾಲ್ ನಾಥ್ ಹೇಳಿದ್ದಾರೆ.

‘ಬಿಜೆಪಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಹಾಳುಗೆಡವಲು ಹೊರಟಿದೆ. ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಹೀಗಾಗಿ ಬಿಜೆಪಿ ವಿರೋಧಿ ಪಕ್ಷಗಳು ಒಟ್ಟಾಗಬೇಕು‘ ಎಂದು ಕಾಂಗ್ರೆಸ್ ಕಾರ್ಯದರ್ಶಿ ಅಜಯ್ ಮಾಕನ್ ಅವರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸುವ ವೇಳೆ ಹೀಗೆ ಹೇಳಿದ್ದಾರೆ.

ಸಚಿವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಸಿಪಿಎಂ ಕಾರ್ಯದರ್ಶಿ ಜಿತೇಂದ್ರ ಚೌದರಿ, ‘ಆಗಾಗ್ಗೆ ಗೋಮೂತ್ರ ಕುಡಿಯುತ್ತಿರುವವರು ಗಣತಂತ್ರದ ಬಗ್ಗೆ ಕೇಳುವಾಗ ಸಿಟ್ಟಿಗೇಳುತ್ತಾರೆ‘ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.