ಜಾನ್ಪುರ್: 14 ಜನರ ಸಾವಿಗೆ ಕಾರಣವಾಗಿದ್ದ 2005ರಲ್ಲಿ ನಡೆದಿದ್ದ ಶ್ರಮಜೀವಿ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣದಲ್ಲಿ ಬಾಂಗ್ಲಾದೇಶದ ಒಬ್ಬ ಸೇರಿದಂತೆ ಇಬ್ಬರಿಗೆ ಸೆಷನ್ಸ್ ನ್ಯಾಯಾಲಯ ಬುಧವಾರ ಮರಣದಂಡನೆ ವಿಧಿಸಿದೆ.

ಈ ಸ್ಫೋಟದಲ್ಲಿ 62 ಜನ ಗಾಯಗೊಂಡಿದ್ದರು. ಪ್ರಕರಣದಲ್ಲಿ ಹಿಲಾಲ್ ಅಲಿಯಾಸ್ ಹಿಲಾಲುದ್ದೀನ್ ಮತ್ತು ನಫಿಕುಲ್ ವಿಶ್ವಾಸ್ ಎಂಬುವವರನ್ನು ಬಂಧಿಸಲಾಗಿತ್ತು. ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಧೀಶ ರಾಜೇಶ್ ಕುಮಾರ್ ರಾಯ್ ಡಿ. 23ರಂದು ಇವರು ದೋಷಿಗಳು ಎಂದು ಆದೇಶಿಸಿದರು. ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿ ಮರಣದಂಡನೆ ಮತ್ತು ತಲಾ ₹5 ಲಕ್ಷ ದಂಡ ವಿಧಿಸಿದ್ದಾರೆ.

ಶಿಕ್ಷೆಗೆ ಗುರಿಯಾಗಿರುವ ಹಿಲಾಲುದ್ದೀನ್ ಬಾಂಗ್ಲಾದೇಶದ ಮೂಲದವನು ಹಾಗೂ ವಿಶ್ವಾಸ್ ಪಶ್ಚಿಮ ಬಂಗಾಳದವನು. ನ್ಯಾಯಾಲಯ ಶಿಕ್ಷೆ ಪ್ರಕಟಿಸುವ ಮೊದಲೇ ನ್ಯಾಯಾಲಯದ ಆವರಣದ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶಿಕ್ಷೆ ಪ್ರಕಟಿಸಿದ ನಂತರ ಅಪರಾಧಿಗಳನ್ನು ಪೊಲೀಸರು ಜೈಲಿಗೆ ಕರೆದೊಯ್ದರು.

ಪಾಟ್ನಾ–ನವದೆಹಲಿ ನಡುವಿನ ರೈಲಿನಲ್ಲಿ 2005ರ ಜುಲೈ 28ರಂದು ಉತ್ತರ ಪ್ರದೇಶದ ಜಾನ್ಪುರ ನಿಲ್ದಾಣದ ಬಳಿ ಸ್ಫೋಟ ಸಂಭವಿಸಿತ್ತು. ಕೋಚ್ ಒಂದರ ಶೌಚಾಲಯದಲ್ಲಿ ಸಂಭವಿಸಿದ ಸ್ಫೋಟಕ್ಕೆ ಆರ್‌ಡಿಎಕ್ಸ್ ಬಳಕೆ ಮಾಡಲಾಗಿತ್ತು. ಇಬ್ಬರು ಯುವಕರು ಬಿಳಿ ಬಣ್ಣದ ಸೂಟ್‌ಕೇಸ್ ತಂದಿದ್ದರು. ಇಳಿಯುವಾಗ ಬರಿಗೈಯಲ್ಲಿ ಇಳಿದರು. ಇದಾದ ಕೆಲವೇ ನಿಮಿಷಗಳಲ್ಲಿ ಸ್ಫೋಟ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು.

ಸರ್ಕಾರದ ಪರ ವಕೀಲ ಸತೀಶ್ ಪಾಂಡೇ ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.