ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಆರೋಪಿಗಳ ಪೈಕಿ ಒಬ್ಬನ ಬೈಕ್ ನೋಂದಣಿ ಸಂಖ್ಯೆ 26/11ರ ಮುಂಬೈ ದಾಳಿಯ ದಿನಾಂಕವನ್ನೇ ಹೊಂದಿರುವುದು ತಿಳಿದುಬಂದಿದೆ.

ಆರೋಪಿ ರಿಯಾಜ್ ಅಖ್ತಾರಿಯ ಬೈಕ್ ‘ಆರ್ಜೆ 27 ಎಎಸ್ 2611’ ನೋಂದಣಿ ಸಂಖ್ಯೆ ಹೊಂದಿದೆ. ಮುಂಬೈ ದಾಳಿಯ ಸ್ಮರಣಾರ್ಥವಾಗಿಯೇ ಆತ ಈ ಸಂಖ್ಯೆಯನ್ನೇ ನೋಂದಾಯಿಸಿಕೊಂಡಿದ್ದ ಎಂದು ಮೂಲಗಳು ಹೇಳಿವೆ.

ಸಂಪಾದಕೀಯ– ಉದಯಪುರ: ಘೋರ ಕೃತ್ಯಕ್ಕೆ ತಕ್ಕ ಶಿಕ್ಷೆ ತ್ವರಿತವಾಗಿ ಆಗಲಿ

ಆರೋಪಿಯು ಬೈಕ್ ಖರೀದಿಸಿರುವುದಕ್ಕೆ ಸಂಬಂಧಿಸಿ ಹಾಗೂ ವಿಶೇಷ ನೋಂದಣಿ ಸಂಖ್ಯೆ ಪಡೆದಿರುವ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಹೆಚ್ಚುವರಿಯಾಗಿ ₹5,000 ಪಾವತಿಸಿ 2013ರಲ್ಲಿ ಆತ ವಿಶೇಷ ನೋಂದಣಿ ಸಂಖ್ಯೆಯನ್ನು ಪಡೆದುಕೊಂಡಿದ್ದ ಎಂದೂ ಕೆಲವು ವರದಿಗಳು ಉಲ್ಲೇಖಿಸಿವೆ.

ಕನ್ಹಯ್ಯ ಲಾಲ್ ಅವರನ್ನು ಕತ್ತು ಸೀಳಿ ಹತ್ಯೆ ಮಾಡಿದ ಬಳಿಕ ಆರೋಪಿಗಳು ‘ಆರ್ಜೆ 27 ಎಎಸ್ 2611’ ನೋಂದಣಿ ಸಂಖ್ಯೆಯ ಬೈಕ್ನಲ್ಲೇ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬಿಗಿ ಭದ್ರತೆ ನಡುವೆಟೈಲರ್ ಅಂತ್ಯಕ್ರಿಯೆ, ಶವಯಾತ್ರೆಯಲ್ಲಿ ಸಾವಿರಾರು ಜನರು ಭಾಗಿ

ಬೈಕ್ ನೋಂದಣಿ ಸಂಖ್ಯೆ ಹಿಂದೆ ಮುಂಬೈ ದಾಳಿಯ ಪ್ರಭಾವ ಇರುವ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಪ್ರವಾದಿ ಮಹಮ್ಮದ್ ಅವರ ಅವಹೇಳನ ಮಾಡಿದ್ದ ಬಿಜೆಪಿಯ ಮಾಜಿ ವಕ್ತಾರೆನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು ಎನ್ನುವ ಕಾರಣಕ್ಕೆ ಟೈಲರ್ ಕನ್ಹಯ್ಯ ಅವರ ಶಿರಚ್ಛೇದ ಮಾಡಲಾಗಿತ್ತು.ಹಂತಕರಲ್ಲಿ ಒಬ್ಬನಾದ ಮಹಮ್ಮದ್ ರಿಯಾಜ್ ಅನ್ಸಾರಿ ಪಾಕ್ ಮೂಲದ ಭಯೋತ್ಪಾದಕ ಗುಂಪುಗಳ ಜತೆಗೆ ನಂಟು ಹೊಂದಿದ್ದಾನೆ ಎನ್ನಲಾಗಿದೆ.

ಉದಯಪುರ ಟೈಲರ್ ಹಂತಕನಿಗೆ ಪಾಕಿಸ್ತಾನದ ನಂಟು: ರಾಜಸ್ಥಾನ ಪೊಲೀಸ್ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.