ನವದೆಹಲಿ: ಘಟಿಕೋತ್ಸವ ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿ ಕೈಮಗ್ಗದಿಂದ ಮಾಡಿದ ನಿಲುವಂಗಿಗಳನ್ನು ಬಳಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಎಲ್ಲ ವಿಶ್ವವಿದ್ಯಾಲಯಗಳಿಗೆ ಮತ್ತೊಮ್ಮೆ ಸೂಚನೆ ನೀಡಿದೆ. ಈ ಸಂಬಂಧ ಯುಜಿಸಿ 2015 ಹಾಗೂ 2019ರಲ್ಲಿಯೂ ಸೂಚನೆ ನೀಡಿತ್ತು.

ಕೈಮಗ್ಗದ ಬಟ್ಟೆಗಳಿಂದ ಮಾಡಿದ ಉಡುಪುಗಳು ಭಾರತದ ಹವಾಮಾನಕ್ಕೆ ಹೆಚ್ಚು ಆರಾಮದಾಯಕ ಮತ್ತು ಭಾರತೀಯರಿಗೆ ಹೆಮ್ಮೆಯ ಪ್ರತೀಕ ಎಂದು ಯುಜಿಸಿ ಹೇಳಿದೆ.

ಈ ಸಂಬಂಧ ಯುಜಿಸಿ ಈ ಹಿಂದೆ ನೀಡಿದ್ದ ಸಲಹೆಯನ್ನು ಅನೇಕ ವಿಶ್ವವಿದ್ಯಾಲಯಗಳು ಪಾಲಿಸುತ್ತಿದ್ದು, ತಮ್ಮ ವಾರ್ಷಿಕ ಘಟಿಕೋತ್ಸವಗಳಲ್ಲಿ ಕೈಮಗ್ಗದ ನಿಲುವಂಗಿಗಳನ್ನು ಬಳಸುತ್ತಿವೆ. ಆದರೆ ಕೆಲ ವಿಶ್ವವಿದ್ಯಾಲಯಗಳು ತಮ್ಮ ಘಟಿಕೋತ್ಸವಗಳ ಸಮವಸ್ತ್ರ ಸಂಹಿತೆಯನ್ನು ಇನ್ನೂ ಬದಲಿಸಿಲ್ಲ. ಹೀಗಾಗಿ ಮತ್ತೊಮ್ಮೆ ಈ ಕುರಿತು ಎಲ್ಲ ವಿ.ವಿಗಳಿಗೆ ಮನವಿ ಮಾಡಲಾಗುತ್ತಿದೆ’ ಎಂದು ಯುಜಿಸಿ ಕಾರ್ಯದರ್ಶಿ ಮನೀಸ್ ಆರ್. ಜೋಶಿ ಪತ್ರದಲ್ಲಿ ತಿಳಿಸಿದ್ದಾರೆ.

‘ಕೈಮಗ್ಗದ ಉಡುಪುಗಳನ್ನು ಬಳಸುವುದು ಭಾರತೀಯರಿಗೆ ಒಂದೆಡೆ ಹೆಮ್ಮೆಯ ಪ್ರತೀಕವಾಗಿದ್ದರೆ, ಇನ್ನೊಂದೆಡೆ ದೇಶದ ಗ್ರಾಮೀಣ ಭಾಗದ ಹಲವರಿಗೆ ಉದ್ಯೋಗಾವಕಾಶ ಒದಗಿಸಿದಂತಾಗುತ್ತದೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ತೆಗೆದುಕೊಂಡ ಕ್ರಮಗಳ ಕುರಿತು ಫೋಟೊ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.