ನವದೆಹಲಿ: ಜೈಲುಪಾಲಾಗಿದ್ದಭೂಗತ ಪಾತಕಿ ಛೋಟಾ ರಾಜನ್ (62) ಕೋವಿಡ್–19 ಸೋಂಕಿನಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿಮೃತಪಟ್ಟಿದ್ದಾನೆ ಎಂಬ ವದಂತಿ ಹರಡಿದೆ.

ತಿಹಾರ್ ಜೈಲಿನಲ್ಲಿದ್ದ ರಾಜನ್ಗೆ ಕೋವಿಡ್ ಸೋಂಕು ತಗುಲಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ರಾಷ್ಟ್ರಮಟ್ಟದ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ವರದಿಗಳನ್ನು ಏಮ್ಸ್ ನಿರಾಕರಿಸಿದೆ.

ಓದಿ:ಸುಲಿಗೆ ಪ್ರಕರಣ: ಭೂಗತ ಪಾತಕಿ ಛೋಟಾ ರಾಜನ್ಗೆ ಎರಡು ವರ್ಷ ಜೈಲು

ಆತನ ವಿರುದ್ಧ ದಾಖಲಾಗಿದ್ದ 68 ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಈವರೆಗೆ ಒಟ್ಟು 35 ಪ್ರಕರಣಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದ್ದು, ಈ ಪೈಕಿ ನಾಲ್ಕು ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

2015ರ ಅಕ್ಟೋಬರ್ನಲ್ಲಿ ಇಂಡೊನೇಷ್ಯಾದಲ್ಲಿ ಭಾರತದ ಅಧಿಕಾರಿಗಳು ರಾಜನ್ನನ್ನು ಬಂಧಿಸಿ, ಕರೆದುಕೊಂಡು ಬಂದಿದ್ದರು. ಆತನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು 75 ಅಪರಾಧಗಳ ಪೈಕಿ ‘ಟಾಡಾ’ದಡಿ ನಾಲ್ಕು, ‘ಪೊಟಾ’ದಡಿ ಒಂದು (ಭಯೋತ್ಪಾದನೆ ತಡೆ ಕಾಯ್ದೆ) ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ (ಮೊಕಾ) 20ಕ್ಕೂ ಹೆಚ್ಚು ಪ್ರಕರಣಗಳು ರಾಜನ್ ವಿರುದ್ಧ ದಾಖಲಾಗಿವೆ.

ಓದಿ:ಛೋಟಾ ರಾಜನ್ ಸೇರಿ 7 ಆರೋಪಿಗಳಿಗೆ ಕಠಿಣ ಸಜೆ

ವಿದೇಶದಲ್ಲಿದ್ದುಕೊಂಡೇ ಭೂಗತ ಲೋಕದ ವ್ಯವಹಾರ ನಿಯಂತ್ರಿಸುತ್ತಿದ್ದ ರಾಜನ್ಗೂ ಮತ್ತೊಬ್ಬ ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂಗೂ ಮುಂಬೈ ಭೂಗತ ಜಗತ್ತಿನ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆದಿತ್ತು. ಭೂಗತ ಲೋಕಕ್ಕೆ ಪ್ರವೇಶಿಸುವ ಮೊದಲು ರಾಜೇಂದ್ರ ನಿಕಲಾಜೆಯಾಗಿದ್ದ ರಾಜನ್, 1970ರಲ್ಲಿ ಚೇಂಬೂರ್ ಬಳಿಯ ಸಿನಿಮಾ ಮಂದಿರಗಳ ಮುಂದೆ ಬ್ಲ್ಯಾಕ್ ಟಿಕೆಟ್ ಮಾರಾಟ ಮಾಡುತ್ತಿದ್ದ. ಜತೆಗೆ ಸಣ್ಣಪುಟ್ಟ ಅಪರಾಧ ಕೃತ್ಯಗಳ ಜತೆಗೆ ಕಳ್ಳಬಟ್ಟಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ. ದಾವೂದ್ ಗ್ಯಾಂಗ್ (ಡಿ–ಗ್ಯಾಂಗ್) ಸೇರಿಕೊಂಡ ನಂತರ ‘ಛೋಟಾ ರಾಜನ್’ ಎಂದು ಕುಖ್ಯಾತನಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.