ಬೆಂಗಳೂರು: ದೇಶದ ಹಲವು ಭಾಗಗಳಲ್ಲಿ ಸೂರ್ಯಗ್ರಹಣ ವೀಕ್ಷಿಸಲು ಕಾತುರರಾಗಿದ್ದವರಿಗೆ ಮೋಡದ ಮರೆ ಬೇಸರ ತರಿಸಿತು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸೂರ್ಯಗ್ರಹಣ ಕಾಣಲು ಮೋಡಗಳು ಬಿಟ್ಟುಕೊಡಲೇ ಇಲ್ಲ.

ಡಿ.26ರಂದು ಬೆಳಿಗ್ಗೆ 8:00 ರಿಂದ 11:00ರ ವರೆಗೂ ಸಂಭವಿಸಿದ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಪ್ರಧಾನಿ ಮೋದಿ ಸಹ ಉತ್ಸಾಹದಿಂದಲೇ ಸೌರ ಕನ್ನಡಕ ಹಿಡಿದು ಸಜ್ಜಾಗಿದ್ದರು. ಆದರೆ, ಮೋಡಗಳು ಖಗೋಳ ವಿಸ್ಮಯವನ್ನು ಮರೆ ಮಾಡಿಕೊಂಡವು.

ಇದನ್ನೂ ಓದಿ:ಖಗೋಳ ಕೌತುಕ Live | ಗ್ರಹಣ ಮೋಕ್ಷ

'ಬಹುತೇಕ ಭಾರತೀಯರಂತೆ ನಾನೂ ಸಹ ಸೂರ್ಯಗ್ರಹಣ ವೀಕ್ಷಿಸುವ ಉತ್ಸಾಹದಲ್ಲಿದ್ದೆ. ದುರದೃಷ್ಟವಶಾತ್, ನನಗೆ ಸೂರ್ಯನ ದರ್ಶನ ಆಗಲಿಲ್ಲ. ಮೋಡಗಳು ಆವರಿಸಿರುವುದರಿಂದ ಗ್ರಹಣ ಕಾಣಲಿಲ್ಲ. ಆದರೆ, ಕೋಯಿಕೋಡ್ ಮತ್ತು ದೇಶದ ಕೆಲವುಭಾಗಗಳಲ್ಲಿ ಕಂಡ ಸೂರ್ಯಗ್ರಹಣವನ್ನು ನೇರಪ್ರಸಾರದಲ್ಲಿ ವೀಕ್ಷಿಸಿದೆ. ತಜ್ಞರೊಂದಿಗೆ ಈ ವಿಷಯದ ಕುರಿತು ಚರ್ಚಿಸುವ ಮೂಲಕ ನನ್ನ ಜ್ಞಾನ ವೃದ್ಧಿಸಿಕೊಂಡೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

2019ರ ಕೊನೆಯ ಸೂರ್ಯಗ್ರಹಣ ದಕ್ಷಿಣ ಭಾರತದ ಹಲವು ಕಡೆ ಸ್ಪಷ್ಟವಾಗಿ ಗೋಚರಿಸಿತು. ಕಾಸರಗೋಡು ಮತ್ತು ಮಂಗಳೂರಿನಲ್ಲಿ ಕಂಕಣ ಸೂರ್ಯಗ್ರಹಣವನ್ನು ಜನರು ಕಣ್ತುಂಬಿಕೊಂಡರು.

ಇದನ್ನೂ ಓದಿ:ಸೂರ್ಯ ಕಂಕಣಕ್ಕೆ ಚಂದ್ರ ಸಾಕ್ಷಿ; ಕಾಸರಗೋಡಿನಲ್ಲಿ ಕಂಡ 'ಬೆಂಕಿ ಉಂಗುರ'

ಚೆರವತ್ತೂರಿನಲ್ಲಿ ಸೂರ್ಯ ಬೆಂಕಿ ಉಂಗುರವಾಗಿ ಜ್ವಲಿಸಿದ. ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಕರ್ನಾಟಕ, ಕೇರಳ, ತಮಿಳುನಾಡು, ಬಂಗಾಳ ಕೊಲ್ಲಿ, ಶ್ರೀಲಂಕಾದ ಉತ್ತರ ಭಾಗ, ಸೌದಿ ಅರೇಬಿಯಾ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಒಮನ್, ಮಲೇಷಿಯಾ, ಇಂಡೋನೇಷಿಯಾ, ಸಿಂಗಪೂರ್ ಸೇರಿದಂತೆ ಹಲವು ದ್ವೀಪ ರಾಷ್ಟ್ರಗಳಲ್ಲಿ ಗ್ರಹಣ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.