ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಮಾಡಿದ ಭಾಷಣವು ಸಂಸತ್ತಿನಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ.

ರಾಹುಲ್ ವಿರುದ್ಧ ಹಲವು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಯ ಸಂಸದರೊಬ್ಬರು ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.

ಭಾಷಣದ ಮೂಲಕ ದೇಶದ ಜನರನ್ನು ರಾಹುಲ್ ಗಾಂಧಿ ಪ್ರಚೋದಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದಾರೆ. ಆ ಹಿನ್ನೆಲೆಯಲ್ಲಿ ರಾಹುಲ್ ವಿರುದ್ಧ ‘ಹಕ್ಕುಚ್ಯುತಿ’ ಹಾಗೂ ‘ಸದನದ ನಿಂದನೆ’ಗೆ ಸಂಬಂಧಿಸಿದಂತೆ ದುಬೆ ನೋಟಿಸ್ ನೀಡಿದ್ದಾರೆ.

ನಿನ್ನೆ ಸಂಸತ್ನಲ್ಲಿ ಮಾತನಾಡಿದ್ದ ರಾಹುಲ್, ‘ಇಲ್ಲಿ ಎರಡು ಭಾರತಗಳಿವೆ. ಮೊದಲನೆಯದ್ದು ಶ್ರೀಮಂತರಿಗೆ ಸೇರಿದ ಭಾರತ. ಎರಡನೆಯದ್ದು ಬಡವರಿಗೆ ಸೇರಿದ ಭಾರತ’ ಎಂದು ಹೇಳಿದ್ದರು.

‘ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ವ್ಯಕ್ತಿಯೊಬ್ಬ ರಾಜಾಡಳಿತ ನಡೆಸಲು ಸಾಧ್ಯವಿಲ್ಲ. ರಾಜ್ಯಗಳ ಒಕ್ಕೂಟದಲ್ಲಿ, ಮಾತುಕತೆ ಮತ್ತು ಸಮಾಲೋಚನೆಯ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಬಿಜೆಪಿಯ ದೋಷಪೂರಿತ ದೃಷ್ಟಿಕೋನವು ನಮ್ಮ ದೇಶವನ್ನು ದುರ್ಬಲಗೊಳಿಸಿದೆ’ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.