ನವದೆಹಲಿ: ಕೇಂದ್ರದ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಬುಧವಾರ ರಾಜ್ಯಸಭೆಯ ಕಲಾಪಕ್ಕೂ ಮುನ್ನ ಸಂಸತ್ತಿಗೆ ಬೈಸಿಕಲ್‌ನಲ್ಲಿ ಬಂದಿಳಿದರು.

ಆದರೆ, ಕೇಂದ್ರ ಸಚಿವರು ತಮ್ಮ ಮನೆಯಿಂದ ಸಂಸತ್ತಿಗೆ ಸೈಕಲ್ ಮೂಲಕ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವಾರು ಸಂದರ್ಭಗಳಲ್ಲಿ, ಅವರು ಆರೋಗ್ಯ ಜಾಗೃತಿಗಾಗಿ ಸಂದೇಶವನ್ನು ಕಳುಹಿಸಲು ಸೈಕಲ್ ಸವಾರಿ ಮಾಡಿದ್ದಾರೆ

2021ರ ನವೆಂಬರ್‌ನಲ್ಲಿ ಭಾರತ ಅಂತರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಹೆಲ್ತ್ ಪೆವಿಲಿಯನ್ ಅನ್ನು ಉದ್ಘಾಟಿಸಲು ಮತ್ತು ಹೆಚ್ಚುತ್ತಿರುವ ಮಾಲಿನ್ಯದ ನಡುವೆ ಆರೋಗ್ಯ ಜಾಗೃತಿ ಮತ್ತು ಫಿಟ್‌ನೆಸ್‌ಗೆ ಜನರನ್ನು ಪ್ರೇರೇಪಿಸಲು ಮಾಂಡವಿಯಾ ಅವರು ಪ್ರಗತಿ ಮೈದಾನವನ್ನು ತಲುಪಲು ಸೈಕಲ್‌ನಲ್ಲಿ ಸವಾರಿ ಮಾಡಿದ್ದರು.

ಈಮಧ್ಯೆ ಬುಧವಾರ ಬೆಳಗ್ಗೆ ರಾಜ್ಯಸಭೆಯ ಕಲಾಪ ಆರಂಭಗೊಂಡಿದ್ದು, ಸಭಾಪತಿ ವೆಂಕಯ್ಯ ನಾಯ್ಡು ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸದಸ್ಯರನ್ನು ಒತ್ತಾಯಿಸಿದ್ದಾರೆ. ಜ. 31 ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಭಾಷಣದೊಂದಿಗೆ ಪ್ರಾರಂಭವಾದ ಬಜೆಟ್ ಅಧಿವೇಶನದಲ್ಲಿ ಸುಗಮ ಕಲಾಪಕ್ಕೆ ಸಹಕರಿಸುವಂತೆ ಸಂಸದರನ್ನು ಕೇಳಿಕೊಂಡರು.

2022-23ರ ಕೇಂದ್ರ ಬಜೆಟ್‌ನಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯ ಘೋಷಣೆಯನ್ನು ಸಚಿವ ಮಾಂಡವಿಯಾ ಮಂಗಳವಾರ ಶ್ಲಾಘಿಸಿದರು. ಇದು ನಾಗರಿಕರ ಜೀವನ ಸೌಕರ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಸ್ವಾವಲಂಬಿ ಭಾರತವನ್ನಾಗಿಸಲು ಮತ್ತು ಉದ್ದೇಶಿತ ಅಂತ್ಯೋದಯ ಯೋಜನೆಗಳನ್ನು ಬಲಪಡಿಸಲು ಬಜೆಟ್ ಪರಿಣಾಮಕಾರಿ ಎಂದು ಸಾಬೀತುಪಡಿಸಿದೆ ಎಂದು ಮಾಂಡವೀಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.