ಬರೇಲಿ (ಉತ್ತರಪ್ರದೇಶ): ಸಾಕ್ಷ್ಯಾಧಾರಗಳ ಕೊರತೆ ಕಾರಣ ತಬ್ಲೀಗ್ ಜಮಾತ್ನ 12 ಸದಸ್ಯರನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಶುಕ್ರವಾರ ದೋಷಮುಕ್ತಗೊಳಿಸಿದೆ. ಈ 12 ಮಂದಿಯಲ್ಲಿ 9 ಮಂದಿ ಥಾಯ್ಲೆಂಡ್ನ ಪ್ರಜೆಗಳು ಎಂದು ಅಧಿಕಾರಿಗಳು ಹೇಳಿದ್ದಾರೆ.

ಥಾಯ್ಲೆಂಡ್ನ ಒಂಬತ್ತು ಮಂದಿ, ತಮಿಳುನಾಡಿನ ಇಬ್ಬರು ಮತ್ತು ಸ್ಥಳೀಯ ವ್ಯಕ್ತಿ ಸೇರಿದಂತೆ ತಬ್ಲೀಗ್ ಜಮಾತ್ನ 12 ಮಂದಿ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಪ್ರತಿವಾದಿಗಳ ಪರ ವಕೀಲ ಮಿಲನ್ಕುಮಾರ್ ಗುಪ್ತ ಹೇಳಿದರು.

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಹೊರಡಿಸಿದ್ದ ಮಾರ್ಗದರ್ಶಿಸೂತ್ರಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಳೆದ ವರ್ಷ ಇವರನ್ನು ಷಹಜಹಾನ್ಪುರದ ಮಸೀದಿಯೊಂದರಿಂದ ಬಂಧಿಸಲಾಗಿತ್ತು.

ಷಹಜಹಾನ್ಪುರದ ಸಾದರ್ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬರೇಲಿಯಲ್ಲಿ ವಿಚಾರಣೆ ನಡೆಯಿತು. ತಬ್ಲೀಗ್ ಜಮಾತ್ನ ಸದಸ್ಯರು ಮುಗ್ಧರು ಎಂದು ವಕೀಲ ಗುಪ್ತ ವಾದಿಸಿದರು.

ಕಳೆದ ವರ್ಷದ ಮಾರ್ಚ್ನಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿನ ಮಾರ್ಕಜ್ನಲ್ಲಿ ತಬ್ಲೀಗ್ ಜಮಾತ್ನ ಸಭೆ ನಡೆದಿತ್ತು. ಈ ಸಂದರ್ಭದಲ್ಲಿ ಸದಸ್ಯರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಇಂಡೊನೇಷ್ಯಾ ಮತ್ತು ಥಾಯ್ಲೆಂಡ್ನಿಂದ ಬಂದಿದ್ದ ಜನರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.