ಲಖನೌ: ಕೆಲವರು ನನ್ನನ್ನು ಟಾರ್ಗೆಟ್ ಮಾಡಲು ಮಾಟ ಮಂತ್ರದ ತಂತ್ರ ಬಳಸಿದ್ದಾರೆ. ದೇವರು ಅವರಿಗೆ ತಿಳಿವಳಿಕೆ ನೀಡಲಿ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಲೋಕೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.

ಕೆಂಪು ಬಣ್ಣದ ಬಟ್ಟೆಯಲ್ಲಿ ತಮ್ಮ ಫೋಟೊ, ಕೆಲವು ರೀತಿಯ ಧಾನ್ಯಗಳು, ತೀರ್ಥ, ಕುಂಕುಮ ಹಾಗೂ ಇನ್ನಿತರ ವಸ್ತುಗಳು ಇರುವ ಚಿತ್ರವನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರುವ ಸಿಂಗ್, 'ನಮ್ಮ ವಿಜ್ಞಾನವು ಚಂದ್ರನನ್ನು ತಲುಪಿದೆ. ಆದಾಗ್ಯೂ ಕೆಲವರು ಇಂಥ ತಂತ್ರವನ್ನು ನಂಬಿಕೊಂಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಲಖೀಂಪುರ ಖೇರಿ ಜಿಲ್ಲೆಯ ಮೊಹಮ್ಮದಿ ಕ್ಷೇತ್ರದ ಶಾಸಕರಾಗಿರುವ ಅವರು, ನಾನು ಭೋಲೆನಾಥನ (ಶಿವ) ಅದ್ವಿತೀಯ ಭಕ್ತ, ಇಂತಹ ತಂತ್ರಗಳಿಂದ ನನಗೆ ಏನೂ ಆಗದು ಎಂಬುದು ಅವರಿಗೆ ಗೊತ್ತಿಲ್ಲ. ದೇವರು ಅವರಿಗೆ ತಿಳಿವಳಿಕೆ ನೀಡಲಿ ಎಂದು ಆಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.