ಬಲರಾಂಪುರ, ಉತ್ತರಪ್ರದೇಶ: ಬಲರಾಂಪುರದ ಧುಬೋಲಿ ಗ್ರಾಮದ ಬಳಿಯ ಸೊಹೆಲ್ವಾ ವನ್ಯಜೀವಿ ಅರಣ್ಯದಲ್ಲಿ ರೋಶನಿ ಯಾದವ್ ಎಂಬ ಐದು ವರ್ಷದ ಬಾಲಕಿಯ ಮೃತ ದೇಹವು ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮಂಕಲ್ ಯಾದವ್ ಎಂಬುವವರ ಮಗಳಾದ ರೋಶನಿ, ಮನೆಯ ಆವರಣದಲ್ಲಿ ಮಲಗಿದ್ದಾಗ, ನಾಪತ್ತೆಯಾಗಿದ್ದಳು. ಬಳಿಕ ಗ್ರಾಮಸ್ಥರು ಬಾಲಕಿಯನ್ನು ಹುಡುಕುವಾಗ, ಗ್ರಾಮದಿಂದ 2 ಕಿ.ಮೀ. ದೂರದಲ್ಲಿರುವ ಕಾಡಿನಲ್ಲಿ ಆಕೆಯ ವಿರೂಪಗೊಂಡ ದೇಹ ಸಿಕ್ಕಿದೆ.ಘಟನೆಯ ಬಗ್ಗೆ ಮಾಹಿತಿ ಬಂದ ಕೂಡಲೇ ಅರಣ್ಯ ಇಲಾಖೆಯ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ತನಿಖೆಗಾಗಿಮೃತ ದೇಹವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅರಣ್ಯಾಧಿಕಾರಿ ಪ್ರಖರ್ ಗುಪ್ತಾ ಅವರು ಹೇಳಿದರು.

‘ವಾಮಾಚಾರದ ಪ್ರಯೋಗಕ್ಕಾಗಿ ಬಾಲಕಿಯ ಹತ್ಯೆಯಾಗಿರಬಹುದು’ ಎಂದು ಗುಪ್ತಾ ಶಂಕಿಸಿದ್ದಾರೆ.

ಆದರೆ, ‘ಬಾಲಕಿಯನ್ನು ಹುಡುಕುವ ವೇಳೆ ಆಕೆಯ ದೇಹವನ್ನು ಚಿರತೆಯೊಂದು ತಿನ್ನುತ್ತಿರುವುದನ್ನು ನೋಡಿದೆವು.ಬೆಂಕಿ ಹಚ್ಚಿದ ಕೂಡಲೇ ಚಿರತೆ ಓಡಿ ಹೋಗಿದ್ದು, ಕಳೆದ ಒಂದು ತಿಂಗಳಿನಿಂದ ನಮ್ಮ ಜಾನುವಾರುಗಳನ್ನೂ ತಿಂದಿದೆ’ ಎಂದು ಗ್ರಾಮದ ಮುಖಂಡ ಅಶೋಕ್ ಕುಮಾರ್ ಥಾರು ತಿಳಿಸಿದ್ದಾರೆ.

ಸದ್ಯ ಬಾಲಕಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.