ಅಲಿಘಡ, ಉತ್ತರ ಪ್ರದೇಶ: ಕೋಚಿಂಗ್ ಸೆಂಟರ್ ಮಾಲೀಕನೊಬ್ಬ ಕೋಚಿಂಗ್ಗೆ ಬರುತ್ತಿದ್ದ 12ನೇ ತರಗತಿ ವಿದ್ಯಾರ್ಥಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಆಲಿಘಡದ ಸುರೇಂದ್ರ ನಗರದ ಕೂವರ್ಸಿ ಎಂಬ ಪ್ರದೇಶದಲ್ಲಿನ ಕೋಚಿಂಗ್ ಸೆಂಟರ್ ಒಂದರ ಮಾಲೀಕ ಧನಂಜಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರ ಆರೋಪ ಕೇಳಿ ಶುಕ್ರವಾರ ಕೋಚಿಂಗ್ ಸೆಂಟರ್ ಮುಂದೆ ಕೆಲ ಪಾಲಕರು ಜಮಾಯಿಸಿದ್ದರು. ಇದರಿಂದ ಬೆದರಿದ್ದ ಆರೋಪಿ ಧನಂಜಯ್ ಬಾಗಿಲು ಹಾಕಿಕೊಂಡು ಕೂತಿದ್ದ. ಬಳಿಕ ಪೊಲೀಸರು ಬಂದು ಉದ್ರಿಕ್ತರನ್ನು ಚದುರಿಸಿ ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ಈ ಕುರಿತು ಬಿಎನ್ಎಸ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಯಾಂಕ್ ಪಾಠಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.